ನಗರದ ಆಳಂದ ಚೆಕ್ ಪೋಸ್ಟ್ ಸಮೀಪದ ಆಳಂದ ಕಾಲೊನಿಯಲ್ಲಿ ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದ ವಾಹನವನ್ನು ವಶಕ್ಕೆ ಪಡೆದಿರುವ ಚೌಕ ಠಾಣೆ ಪೊಲೀಸರು, ಏಳು ಜಾನುವಾರುಗಳನ್ನು ರಕ್ಷಿಸಿದ್ದಾರೆ. ಅಲ್ಲದೇ, ವಾಹನದ ಚಾಲಕ ಮಹ್ಮದ್ ಅಲ್ಲಾವುದ್ದೀನ್ ಖುರೇಶಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ‘ಬಕ್ರೀದ್ ಅಂಗವಾಗಿ ಜಾನುವಾರುಗಳನ್ನು ಆಳಂದ ಸಂತೆಯಿಂದ ಕಲಬುರಗಿಗೆ ತರಲಾಗಿತ್ತು. ಇವು ಮಹ್ಮದ್ ಸಿರಾಜ್ ಮಿಜಗುರಿ ಎಂಬುವರಿಗೆ ಸೇರಿವೆ. ವಾಹನವು ಶಫೀಕ್ ಎಂಬುವರಿಗೆ ಸೇರಿದೆ’ ಎಂದು ವಾಹನದ ಚಾಲಕ ಮಹ್ಮದ್ ಅಲ್ಲಾವುದ್ದೀನ್ ಹೇಳಿದ್ದಾಗಿ ಮೂಲಗಳು ತಿಳಿಸಿವೆ. ಈ ಕುರಿತು ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಲಕ್ಷ್ಮೀಕಾಂತ ಸ್ವಾದಿ ನೀಡಿದ ದೂರಿನನ್ವಯ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

