ಭಟ್ಕಳ: ವಿವಾಹವಾದಾಗಿನಿಂದಲೂ ವರದಕ್ಷಿಣೆಗಾಗಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ಪತಿ ಮತ್ತು ಅವರ ಕುಟುಂಬದವರ ವಿರುದ್ಧ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಗೊರಟೆಯ ಜಾಣನಮನೆ ನಿವಾಸಿ ಮಾನಸಾ (ಕಾವ್ಯ) ಮೊಗೇರ ದೂರು ನೀಡಿದವರಾಗಿದ್ದು, ಇವರ ಪತಿ ಶ್ರೀಧರ ಮೊಗೇರ, ಮಾವ ಪರಮೇಶ್ವರ ಮೊಗೇರ, ಅತ್ತೆ ಪದ್ಮಾವತಿ ಹಾಗೂ ಮೈದುನರಾದ ಯೋಗೇಶ್ವರ ಮತ್ತು ಆನಂದ ಮೊಗೇರ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ.2016 ರಲ್ಲಿ ವಿವಾಹವಾಗಿದ್ದ ಮಾನಸಾ ಅವರಿಗೆ ತವರು ಮನೆಯಿಂದ ಹಣ ತರುವಂತೆ ಪೀಡಿಸಿ, ಹಲ್ಲೆ ನಡೆಸಲಾಗುತ್ತಿತ್ತು ಎನ್ನಲಾಗಿದೆ. ಅಷ್ಟೇ ಅಲ್ಲದೆ, 2024 ರಲ್ಲಿ ಇವರನ್ನು ಮನೆಯಿಂದಲೂ ಹೊರಹಾಕಲಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ. ಸದ್ಯ ಭಟ್ಕಳ ಗ್ರಾಮೀಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

