ಹುಬ್ಬಳ್ಳಿ:-ಕುಖ್ಯಾತ ಅಂತಾರಾಜ್ಯ ಕಳ್ಳನನ್ನು ಹುಬ್ಬಳ್ಳಿ ಉಪನಗರ ಠಾಣೆ ಪೊಲೀಸರು ಭರ್ಜರಿ ಕಾರ್ಯಾಚರಣೆ ಮಾಡುವ ಮೂಲಕ ಸೆರೆ ಹಿಡಿದಿದ್ದಾರೆ. ಗಿರಿಧರಕುಮಾರ ದುದೇಕುಲಾ ಬಂಧಿತ ಆರೋಪಿಯಾಗಿದ್ದಾನೆ. ಆರೋಪಿತನಿಂದ 9.20ಲಕ್ಷ ರೂ., ನಲವತ್ತು ಸಾವಿರ ಬೆಲೆ ಬಾಳುವ ವಾಚ್, ಮೊಬೈಲ್ ವಶಕ್ಕೆ ಪಡೆಯಲಾಗಿದೆ. ಆರೋಪಿ ಆಂಧ್ರಪ್ರದೇಶದ ಕಡಪ ಜಿಲ್ಲೆಯವನಾಗಿದ್ದು, ನಗರದ ದಾಜಿಬಾನ್ ಪೇಟೆಯಲ್ಲಿ ಅನುಮಾಮಾಸ್ಪದವಾಗಿ ಓಡಾಡುತ್ತಿದ್ದ ಆರೋಪಿಯನ್ನು ಠಾಣೆಗೆ ಕರೆತಂದು ವಿಚಾರಣೆ ವೇಳೆ ತನ್ನ ಅಸಲಿಯತ್ತನ್ನ ಬಾಯ್ಬಿಟ್ಟಿದ್ದಾನೆ. ಅನೇಕ ಕಳ್ಳತನ ಪ್ರಕರಣದಲ್ಲಿ ಆಂಧ್ರ ಪೊಲೀಸರಿಗೆ ಬೇಕಾದ ಕಳ್ಳನೀತಾನಾಗಿದ್ದನು. ಪೊಲೀಸ್ ಆಯುಕ್ತ ಎಂ.ಎನ್. ನಾಗರಾಜ್ ನೇತೃತ್ವದಲ್ಲಿ ಉಪನಗರ ಠಾಣೆ ಇನ್ಸಪೆಕ್ಟರ್ ಡಿಸೋಜಾ ಅವರಿಂದ ಕಾರ್ಯಾಚರಣೆ ಮಾಡಿದ್ದಾರೆ. ಇನ್ನೂ ಆರೋಪಿತನ ಬಂಧನಕ್ಕೆ ಸಹಕರಿಸಿದ ಸಿಬ್ಬಂದಿಗೆ ಸೂಕ್ತ ಬಹುಮಾನವನ್ನು ಪೊಲೀಸ್ ಆಯುಕ್ತ ಎಂ.ಎನ್. ನಾಗರಾಜ್ ಘೋಷಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





