Breaking News

ಮಗನ ವಿರುದ್ಧ ಅತ್ಯಾಚಾರ ಪ್ರಕರಣ: ಮನನೊಂದ ತಾಯಿ ಆತ್ಮಹತ್ಯೆಗೆ ಯತ್ನ

ಸಿಂಧನೂರು: ತಾಲ್ಲೂಕಿನ ಬೋಗಾಪುರ ಗ್ರಾಮದ ವ್ಯಕ್ತಿಯೊಬ್ಬರ ವಿರುದ್ಧ ಅತ್ಯಾಚಾರ ಆರೋಪದ ಪ್ರಕರಣ ದಾಖಲಾಗಿದ್ದಕ್ಕೆ ತಾಯಿ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಗಂಗಮ್ಮ(60) ಆತ್ಮಹತ್ಯೆಗೆ ಯತ್ನಿಸಿದವರು. ತುರ್ವಿಹಾಳ ಪೊಲೀಸ್ ಠಾಣೆಯಲ್ಲಿ ಗಂಗಮ್ಮ ಅವರ ಮಗನ ವಿರುದ್ಧ ಅದೇ ಗ್ರಾಮದ ಮಹಿಳೆಯೊಬ್ಬರು ಅತ್ಯಾಚಾರ ಆರೋಪದಡಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾದ ನಂತರ ದೂರುದಾರ ಮಹಿಳೆಯ ಕುಟುಂಬಸ್ಥರು ಗಂಗಮ್ಮ ಅವರ, ಮನೆಗೆ ನುಗ್ಗಿ ಆರೋಪಿ ಗಂಗಪ್ಪನನ್ನು ಹುಡುಕಿ ಒಪ್ಪಿಸಬೇಕು. ಇಲ್ಲದಿದ್ದರೆ ಗ್ರಾಮ ಬಿಟ್ಟು ತೊಲಗಬೇಕು ಎಂದು ಬೇದರಿಕೆ ಹಾಕಿದ್ದಾರೆ. ಈ ಘಟನೆಯಿಂದ ಮನನೊಂದ ಗಂಗಮ್ಮ ಆತ್ಮಹತ್ಯೆಗೆ ಯತ್ನಿಸಿದ್ದು, ಸಿಂಧನೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಸ್ತುತ ವಿಷಯ ತಿಳಿದ ಎಸ್‌ಐ ಸುಜಾತಾ ಅವರು, ಗ್ರಾಮಕ್ಕೆ ತೆರಳಿ ಗಂಗಮ್ಮ ಅವರ ಕುಟುಂಬಕ್ಕೆ ಸೂಕ್ತ ಭದ್ರತೆ ಒದಗಿಸಿದ್ದಾರೆ ಎಂದು ತಿಳಿದು ಬಂದಿದೆ.

Share News

About BigTv News

Check Also

3 ವರ್ಷದಿಂದ ಪ್ರೀತಿಸುವಂತೆ ಕಿರುಕುಳ: ಒಪ್ಪದಿದ್ದಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಯುವತಿಯನ್ನು ತಬ್ಬಿಕೊಂಡ ಯುವಕ!

ಮೈಸೂರು: ಪ್ರೇಮ ನಿರಾಕರಿಸಿದ್ದ ಯುವತಿಗೆ ಕಿರುಕುಳ ನೀಡುತ್ತಿದ್ದ ಆರೋಪದ ಯುವಕನೊಬ್ಬ, ಮೈಸೂರಿನ ವಿಜಯನಗರದ ಡಿಪ್ಲೊಮಾ ಕಾಲೇಜು ಹಾಸ್ಟೆಲ್ ಬಳಿ ಬೆಂಕಿಯಿಂದ …

Leave a Reply

Your email address will not be published. Required fields are marked *