Breaking News

ಹುಬ್ಬಳ್ಳಿಯ ನವನಗರಕ್ಕೆ ಬರುವ ಸಮಯದಲ್ಲಿ ಕಾರು ಅಪಘಾತ, ಸ್ಥಳದಲ್ಲಿ ಮೂವರು ಸಾವು..!

ಧಾರವಾಡ ಜಿಲ್ಲೆಯ ಪುಣೆ- ಬೆಂಗಳೂರು ರಸ್ತೆಯ ಜಿಗಳೂರು ಬಳಿಯಿರುವ ದರ್ಗಾವೊಂದಕ್ಕೆ ಕಾರು ಡಿಕ್ಕಿಹೊಡೆದ ಪರಿಣಾಮ ಪತಿ-ಪತ್ನಿ ಅಳಿಯ ಸಾವಿಗೀಡಾಗಿರುವ ಘಟನೆ ಶನಿವಾರ ತಡರಾತ್ರಿ ನಡೆದಿದೆ. ಬೆಂಗಳೂರಿನಲ್ಲಿ ಸಂಬಂಧಿಕರ ಗೃಹಪ್ರವೇಶ ಮುಗಿಸಿ ಹುಬ್ಬಳ್ಳಿಯ ನವನಗರಕ್ಕೆ ಬರುವ ಸಮಯದಲ್ಲಿ ನಿಯಂತ್ರಣ ತಪ್ಪಿ ದರ್ಗಾಗೆ ಕಾರು ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲಿ ಮೂವರು ಸಾವಿಗೀಡಾಗಿದ್ದಾರೆ.

ಕೆಯುಡಿಯ ಎಇಇ ರವೀಂದ್ರ ನಾಗನಾಥ, ಅವರ ಮಾವ ಹನಮಂತಪ್ಪ ಬೇವಿನಕಟ್ಟಿ, ಅತ್ತೆ ರೇಣುಕಾ ಬೇವಿನಕಟ್ಟಿ ಸ್ಥಳದಲ್ಲಿ ಸಾವಿಗೀಡಾಗಿದ್ದು, ರವೀಂದ್ರ ಅವರ ಪತ್ನಿ ಅರುಂಧತಿಗೆ ಗಂಭೀರ ಗಾಯಗಳಾಗಿವೆ. ಸ್ಥಳಕ್ಕೆ ಕುಂದಗೋಳ ಪೋಲಿಸ್ ಠಾಣೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.

Share News

About bigtvnews22

Check Also

ಬೆಂಗಳೂರಲ್ಲಿ ನಕಲಿ ಡೇಟಿಂಗ್ ಬಲೆ, 20 ಲಕ್ಷ ರೂ. ಮೌಲ್ಯದ ಚಿನ್ನ ಲೂಟಿ

ಬೆಂಗಳೂರು: ಚಂದ್ರಾ ಲೇಔಟ್‌ನಲ್ಲಿ ಡೇಟಿಂಗ್ ಆಯಪ್ ಮೂಲಕ ಪರಿಚಯವಾದ ವ್ಯಕ್ತಿಯನ್ನು ಮನೆಗೆ ಕರೆಸಿಕೊಂಡ ಯುವಕನಿಗೆ ಚಾಕು ತೋರಿಸಿ ಬೆದರಿಸಿ, 226 …

Leave a Reply

Your email address will not be published. Required fields are marked *