ಬೆಂಗಳೂರು ನಗರದ ಬಾಣಸವಾಡಿಯಲ್ಲಿ 2 ವರ್ಷದ ಕಾರ್ಲೆಟ್ ಡೈಸಿ ಎಂಬ ಮಗು ಅನುಮಾನಾಸ್ಪದವಾಗಿ ಸಾವನ್ನಪ್ಪಿದೆ. ಉಸಿರಾಟದ ಸಮಸ್ಯೆಯಿಂದ ಮಗು ಮೃತಪಟ್ಟಿದೆ ಎಂದು ತಂದೆ ಹೇಳಿದ್ದರೂ, ಮಗುವಿನ ದೇಹದ ಮೇಲಿನ ಗಾಯದ ಗುರುತುಗಳಿಂದ ಪ್ರಕರಣ ಅನುಮಾನಕ್ಕೆ ಕಾರಣವಾಗಿದೆ. ಮಗುವಿನ ತಾಯಿ ರೋಸ್ಲಿನ್, ತನ್ನ ಪ್ರಿಯಕರ ಜೇಸನ್ ಆಂಥೋನಿ ಮಗುವನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಮತ್ತೊಂದೆಡೆ, ದಂಪತಿಯ ಸ್ನೇಹಿತೆಯೊಬ್ಬರು ಕೂಡ ಮಗುವಿಗೆ ತಾಯಿ ಹೊಡೆಯುತ್ತಿದ್ದುದನ್ನು ನೋಡಿದ್ದಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ವರದಿ ಬಳಿಕ ಸಾವಿನ ನಿಖರ ಕಾರಣ ತಿಳಿಯಲಿದೆ. ಸದ್ಯ ಪೊಲೀಸರು ಬಿಎನ್‌ಎಸ್‌ಎಸ್ 194/4 ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

