Breaking News

ರೈಲಿನಲ್ಲಿ ಚಾಕು ತೋರಿಸಿ ದರೋಡೆಗೆ ಯತ್ನ

ಮುಂಬೈ–ಮಂಗಳೂರು ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಕರನ್ನು ಚಾಕು ತೋರಿಸಿ ಬೆದರಿಸಿ ದರೋಡೆ ಮಾಡಲು ಯತ್ನಿಸಿದ ಯುವಕನನ್ನು ಎಚ್ಚೆತ್ತ ಪ್ರಯಾಣಿಕರು ಹಿಡಿದು ಗೋವಾ ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ. ರೈಲು ಟಿಕೆಟ್‌ ಕಲೆಕ್ಟರ್‌ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಯುವಕನನ್ನು ಪ್ರಶ್ನಿಸಿದಾಗ ಆತ ಓಡಲು ಯತ್ನಿಸಿದ್ದಾನೆ. ಕುಂದಾಪುರದ ನಾಗರಾಜ್ ಪೂಜಾರಿ ಸೇರಿದಂತೆ ಹಲವು ಪ್ರಯಾಣಿಕರು ಬೆನ್ನಟ್ಟಿ ಹಿಡಿದ ವೇಳೆ ಆತ ಚಾಕು ತೋರಿಸಿ ಬೆದರಿಸಿದ್ದರೂ, ಪ್ರಯಾಣಿಕರು ಧೈರ್ಯದಿಂದ ಚಾಕುವನ್ನು ಕಸಿದುಕೊಂಡಿದ್ದಾರೆ. ಬಂಧಿತ ಯುವಕ ಮುಂಬೈನ ಮುಂಬ್ರಾ ನಿವಾಸಿಯಾಗಿದ್ದು, ಆರು ಸದಸ್ಯರ ಗ್ಯಾಂಗ್‌ನ ಭಾಗ ಎನ್ನಲಾಗಿದೆ. ಉಳಿದ ಐವರು ಘಟನೆ ಬಳಿಕ ಪರಾರಿಯಾಗಿದ್ದು, ಗೋವಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

Share News

About BigTv News

Check Also

ಗೃಹಪ್ರವೇಶದ ನಂತರ ಬೆಂಗಳೂರು ಟೆಕ್ಕಿಗೆ ಕಾದಿತ್ತು ಶಾಕ್: 12 ಲಕ್ಷ ಮೌಲ್ಯದ ಚಿನ್ನ ಕದ್ದ ಕಳ್ಳರು, FIRಗೂ ಅಲೆದಾಟ

ಬೆಂಗಳೂರು: ಹೊಸ ಮನೆಯ ಗೃಹಪ್ರವೇಶದ ಸಂಭ್ರಮದಲ್ಲಿದ್ದ ಸಾಫ್ಟ್‌ವೇರ್ ಎಂಜಿನಿಯರ್ ಕುಟುಂಬದ 80 ಗ್ರಾಂ ಚಿನ್ನಾಭರಣ ಕಳವಾಗಿದ್ದು, ಮೌಲ್ಯ ಸುಮಾರು ₹12 …

Leave a Reply

Your email address will not be published. Required fields are marked *