Breaking News

ಸೈಬರ್‌ ಕ್ರೈಮ್‌, ಇ.ಡಿ, ಸಿ.ಬಿ.ಐ ಹೆಸರಿನಲ್ಲಿ ಹಿರಿಯ ನಾಗರಿಕರಿಗೆ 22 ಲಕ್ಷ ರೂ. ವಂಚನೆ: ಪ್ರಕರಣ ದಾಖಲು

ಉಡುಪಿ ಜಿಲ್ಲೆಯ ನಿವೃತ್ತ ಬ್ಯಾಂಕ್ ಉದ್ಯೋಗಿಯೊಬ್ಬರಿಗೆ ಸೈಬರ್ ವಂಚಕರು ಪೊಲೀಸ್, ಇ.ಡಿ. ಹಾಗೂ ಸಿಬಿಐ ಅಧಿಕಾರಿಗಳೆಂದು ನಂಬಿಸಿ ₹22 ಲಕ್ಷ ಹಣವನ್ನು ವಂಚಿಸಿರುವ ಘಟನೆ ನಡೆದಿದೆ. ಜಯಕರ ಕಾಮತ್ ಪಿ. (76) ಎಂಬವರು ವಂಚನೆಗೆ ಒಳಗಾದವರು. ವಾಟ್ಸಾಪ್‌ ವಿಡಿಯೋ ಕರೆ ಮೂಲಕ ಸಂಪರ್ಕಿಸಿದ ಆರೋಪಿಗಳು, ಅವರ ಬ್ಯಾಂಕ್ ಖಾತೆಯಿಂದ ಮನಿ ಲಾಂಡರಿಂಗ್ ನಡೆಯುತ್ತಿದೆ ಎಂದು ಬೆದರಿಕೆ ಹಾಕಿ, ಫಂಡ್‌ ಪರಿಶೀಲನೆ ಹೆಸರಿನಲ್ಲಿ RTGS ಮೂಲಕ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಜುಲೈ 11ರಿಂದ 16ರವರೆಗೆ ನಿರಂತರ ಕರೆ ಮಾಡಿ ವಿವಿಧ ಅಧಿಕಾರಿಗಳ ಹೆಸರಿನಲ್ಲಿ ನಂಬಿಕೆ ಮೂಡಿಸಿದ್ದರು. ಬ್ಯಾಂಕ್ ಖಾತೆಯ ವಿವರಗಳನ್ನು ಪಡೆದು ಒಟ್ಟು ₹22 ಲಕ್ಷವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡಿರುವ ಆರೋಪಿಗಳ ವಿರುದ್ಧ ಉಡುಪಿ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Share News

About BigTv News

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *