Breaking News

ರಾಜ್ಯದಲ್ಲಿ ಬೆಚ್ಚಿ ಬೀಳಿಸೋ ಘಟನೆ : ಲಿವಿನ್ ರಿಲೇಶನ್ ಶಿಪ್ ನಲ್ಲಿದ್ದ ಜೋಡಿಯಿಂದ 2 ವರ್ಷದ ಮಗುವಿನ ಹತ್ಯೆ!

ಬೆಂಗಳೂರು ಬಾಣಸವಾಡಿಯ ಇಂದಿರಾ ಸ್ಟ್ರೀಟ್‌ನಲ್ಲಿ ಎರಡು ವರ್ಷದ ಕಾರ್ಲೆಟ್ ಡೈಸಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ಉಸಿರಾಟದ ಸಮಸ್ಯೆಯಿಂದ ಮಗು ಸಾವನ್ನಪ್ಪಿದೆ ಎಂದು ಮಗುವಿನೊಂದಿಗೆ ವಾಸವಾಗಿದ್ದ ಜೈಸನ್ ಆಂಥೋನಿ ಹಾಗೂ ರೋಸ್ಲಿನ್ ಲಿವಿನ್ ತಿಳಿಸಿದ್ದಾರೆ. ಆದರೆ, ಮಗುವಿನ ಸಾವಿನ ಬಗ್ಗೆ ದಂಪತಿಯ ಸ್ನೇಹಿತೆಯೇ ಪೊಲೀಸರಿಗೆ ದೂರು ನೀಡಿದ್ದು, ಮಗುವಿಗೆ ತಾಯಿ ಹಲ್ಲೆ ಮಾಡುತ್ತಿದ್ದುದನ್ನು ತಾನು ನೋಡಿದ್ದಾಗಿ ಹಾಗೂ ಮಗುವಿನ ದೇಹದ ಮೇಲೆ ಗಾಯದ ಗುರುತುಗಳಿದ್ದವು ಎಂದು ಆರೋಪಿಸಿದ್ದಾರೆ. ಇದರಿಂದ ಪ್ರಕರಣ ಮತ್ತಷ್ಟು ಅನುಮಾನಕ್ಕೆ ಕಾರಣವಾಗಿದೆ. ಮರಣೋತ್ತರ ಪರೀಕ್ಷೆಯ ಬಳಿಕ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಪೊಲೀಸರು ಬಿಎನ್‌ಎಸ್‌ ಸೆಕ್ಷನ್ 194(4) ಅಡಿಯಲ್ಲಿ ಪ್ರಕರಣ ದಾಖಲಿಸಿ ಸಾವಿನ ನಿಖರ ಕಾರಣ ಪತ್ತೆಹಚ್ಚಲು ತನಿಖೆ ಮುಂದುವರಿಸಿದ್ದಾರೆ.

Share News

About BigTv News

Check Also

6ನೇ ತರಗತಿ ಮೇಲೆ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಆರೋಪಿ ಬಂಧನ

ಮುಂಡಗೋಡ: ಆರನೇ ತರಗತಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಗರ್ಭಿಣಿಯನ್ನಾಗಿಸಿದ ಆರೋಪದ ಮೇಲೆ 65 ವರ್ಷದ ಇಸ್ಮಾಯಿಲ್ ಹುಲಗೂರ …

Leave a Reply

Your email address will not be published. Required fields are marked *