Breaking News

ನೆದರ್ಲ್ಯಾಂಡ್ಸ್ ಪ್ರಧಾನ ಮಂತ್ರಿ ಮಾರ್ಕ್ ರುಟ್ಟೆ ಇಂದು ದೇಶದ ಸಿಲಿಕಾನ್ ಸಿಟಿ ಬೆಂಗಳೂರಿಗೆ ಭೇಟಿ..

ಬೆಂಗಳೂರು: ನೆದರ್ಲ್ಯಾಂಡ್ಸ್ ಪ್ರಧಾನಿ ಮಾರ್ಕ್ ರುಟ್ಟೆ ಇಂದು ಬೆಂಗಳೂರಿಗೆ ಭೇಟಿ ನೀಡಿದ್ದು, ಹೂಡಿಕೆಗಳ ಸಂಬಂಧ ರಾಜ್ಯ ಸರ್ಕಾರ, ಉದ್ಯಮಿಗಳ ಜೊತೆ ಸಭೆ ನಡೆಸಲಿದ್ದಾರೆ. ವಾರ್ಷಿಕ ಜಿ20 ಶೃಂಗಸಭೆಗೆ ಭಾರತಕ್ಕೆ ಆಗಮಿಸಿರುವ ನೆದರ್ಲ್ಯಾಂಡ್ಸ್ ಪ್ರಧಾನ ಮಂತ್ರಿ ಮಾರ್ಕ್ ರುಟ್ಟೆ ಇಂದು ದೇಶದ ಸಿಲಿಕಾನ್ ಸಿಟಿ ಬೆಂಗಳೂರಿಗೆ ಭೇಟಿ ನೀಡಿದ್ದಾರೆ. 120 ಮಂದಿ ಉದ್ಯಮಿಗಳ ದೊಡ್ಡ ನಿಯೋಗದೊಂದಿಗೆ ಅವರು ಬೆಂಗಳೂರಿಗೆ ಭೇಟಿ ನೀಡಿದ್ದಾರೆ. ಅವರಿಗೆ ನೆದರ್‌ಲ್ಯಾಂಡ್ಸ್ ನ ವಿದೇಶಿ ವ್ಯಾಪಾರ ಮತ್ತು ಅಭಿವೃದ್ಧಿ ಸಹಕಾರ ಸಚಿವ, ವೈದ್ಯಕೀಯ ಮತ್ತು ಕ್ರೀಡಾ ಸಚಿವ ಮತ್ತು ಹಾಗ್ ನಗರದ ಮೇಯರ್ ಸಾಥ್​​ ನೀಡಿದ್ದಾರೆ.

ವಿಧಾನಸೌಧದಲ್ಲಿ ರಾಜ್ಯ ಸರ್ಕಾರದ ಡಿಸಿಎಂ ಡಿ ಕೆ ಶಿವಕುಮಾರ್, ಬೃಹತ್ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಸೇರಿ ಅಧಿಕಾರಿಗಳ ಜೊತೆ ನೆದರ್ಲ್ಯಾಂಡ್ಸ್ ಪ್ರಧಾನಿ ಸಭೆ ನಡೆಸಲಿದ್ದಾರೆ. ಈ ಹಿನ್ನೆಲೆ ಇಂದು ಮಧ್ಯಾಹ್ನ 3 ಗಂಟೆವರೆಗೆ ವಿಧಾನಸೌಧಕ್ಕೆ ಸಾರ್ವಜನಿಕರು, ಮಾಧ್ಯಮಗಳಿಗೆ ನಿರ್ಬಂಧ ಹೇರಲಾಗಿದೆ. ಮಧ್ಯಾಹ್ನ 1 ಗಂಟೆಯಿಂದ 3 ಗಂಟೆವರೆಗೆ ಸಭೆ ನಡೆಯಲಿದೆ. ಈ ವೇಳೆ ರಾಜ್ಯದಲ್ಲಿನ ಹೂಡಿಕೆ, ಸಹಭಾಗಿತ್ವ ಮುಂತಾದುವುಗಳ ಬಗ್ಗೆ ಚರ್ಚೆ ನಡೆಯಲಿದೆ.

Share News

About BigTv News

Check Also

ಅವಳಿ ನಗರದಲ್ಲಿ ಗಾಂಜಾ ಪೆಡ್ಲರ್‌ಗಳ ಬೇಟೆ; 6 ಮಂದಿ ಅಂದರ್, 491 ಗ್ರಾಂ ಗಾಂಜಾ ಜಪ್ತಿ!

ಹುಬ್ಬಳ್ಳಿ–ಧಾರವಾಡದಲ್ಲಿ ಗಾಂಜಾ ಪೆಡ್ಲರ್‌ಗಳಿಗೆ ಖಾಕಿ ಸಿಂಹಸ್ವಪ್ನ; ಎರಡು ಕಡೆ ಏಕಕಾಲಕ್ಕೆ ಪೊಲೀಸ್ ಬೇಟೆ, 6 ಮಂದಿ ಅಂದರ್.. ಗಾಂಜಾ ದಂಧೆಗೆ …

Leave a Reply

Your email address will not be published. Required fields are marked *