Breaking News

ಬಸ್‌ನಲ್ಲಿ ವಿದ್ಯಾರ್ಥಿನಿಗೆ ಕಿರುಕುಳ ಆರೋಪ; ಬೆಲ್ಟ್, ಕಲ್ಲುಗಳಿಂದ ಬಡಿದಾಡಿಕೊಂಡ ಎರಡು ಗ್ರಾಮದ ಯುವಕರು!

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಜಕ್ಕಬಾಳ ಗ್ರಾಮದಲ್ಲಿ ಬಸ್‌ನಲ್ಲಿ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ವಿಚಾರ ಎರಡು ಗ್ರಾಮಗಳ ಯುವಕರ ನಡುವಿನ ಹಿಂಸಾತ್ಮಕ ಗಲಾಟೆಗೆ ಕಾರಣವಾಗಿದೆ. ಜಕ್ಕಬಾಳ ಮತ್ತು ಬಸರಗಿ ಗ್ರಾಮದ ಯುವಕರ ನಡುವೆ ಮೊದಲು ಮಾತಿನ ಚಕಮಕಿ ನಡೆದಿದ್ದು, ಬಸ್ ಜಕ್ಕಬಾಳ ತಲುಪುತ್ತಿದ್ದಂತೆ ಗಲಾಟೆ ತೀವ್ರಗೊಂಡಿದೆ. ಬಸ್ ಅನ್ನು ಮಧ್ಯರಸ್ತೆಯಲ್ಲಿ ನಿಲ್ಲಿಸಿ, ಎರಡೂ ಗುಂಪಿನ ಯುವಕರು ಬೆಲ್ಟ್, ಕಲ್ಲು ಹಾಗೂ ಕಟ್ಟಿಗೆಗಳಿಂದ ಪರಸ್ಪರ ಹಲ್ಲೆ ನಡೆಸಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ನೀಡಿದರೂ ಅಧಿಕಾರಿಗಳು ಹಾಗೂ ಪೊಲೀಸರು ಸಮಯಕ್ಕೆ ಸ್ಥಳಕ್ಕೆ ಬಂದಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಮಹಿಳೆಯರು ಮತ್ತು ವಿದ್ಯಾರ್ಥಿನಿಯರ ಸುರಕ್ಷತೆಗೆ ಬಸ್‌ಗಳಲ್ಲಿ ಸೂಕ್ತ ಭದ್ರತೆ ಒದಗಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಪ್ರಕರಣದ ಕುರಿತು ಸವದತ್ತಿ ಪೊಲೀಸ್ ಠಾಣೆಯಲ್ಲಿ ತನಿಖೆ ಮುಂದುವರಿದಿದೆ.

Share News

About BigTv News

Check Also

ಸರಗಳ್ಳತನ ಮಾಡುತ್ತಿದ್ದ ಅಪ್ರಾಪ್ತ ಸೇರಿ ಇಬ್ಬರು ಆರೋಪಿಗಳ ಬಂಧನ

ಬೆಂಗಳೂರು: ಅಪ್ರಾಪ್ತ ಬಾಲಕನೊಂದಿಗೆ ಸೇರಿ ಮಹಿಳೆಯರ ಚಿನ್ನದ ಮಾಂಗಲ್ಯ ಸರ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಡೇಪಾಳ್ಯ ಪೊಲೀಸರು ವಶಕ್ಕೆ …

Leave a Reply

Your email address will not be published. Required fields are marked *