ಗುಜರಾತ್‌ನ ವಡೋದರಾದಲ್ಲಿ ಕಾರು ಚಲಾಯಿಸಿ ಹಲವಾರು ವಾಹನಗಳಿಗೆ ಡಿಕ್ಕಿ ಹೊಡೆದು, ಓರ್ವ ಮಹಿಳೆಯನ್ನು ಕೊಂದು, ಇತರ ನಾಲ್ವರನ್ನು ಗಾಯಗೊಳಿಸಿದ ಪ್ರಕರಣದ 23 ವರ್ಷದ ಆರೋಪಿ ರಕ್ಷಿತ್ ಚೌರಾಸಿಯಾ, ಗುರುವಾರ ತಡರಾತ್ರಿ ಘಟನೆ ನಡೆದಾಗ ತಾನು ಕುಡಿದೇ ಇರಲಿಲ್ಲ ಎಂದು ಹೇಳಿಕೊಂಡಿದ್ದಾನೆ.ರಕ್ಷಿತ್ ಚೌರಾಸಿಯಾನನ್ನು ಹಿಡಿದ ಪ್ರತ್ಯಕ್ಷದರ್ಶಿಗಳು, ಆತ ಕುಡಿದು ವಾಹನ ಚಲಾಯಿಸಿದ್ದಾಗಿ ಪೊಲೀಸರಿಗೆ ತಿಳಿಸಿದ್ದರು. ರಕ್ಷಿತ್ ಕಾರಿನಿಂದ ಹೊರಬಂದ ನಂತರ “ಅನದರ್ ರೌಂಡ್, ಅನದರ್ ರೌಂಡ್” ಎಂದು ಜೋರಾಗಿ ಕಿರುಚುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ. ಘಟನೆಯ ವಿಡಿಯೊಗಳು ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಸ್ಥಳೀಯರು ಆರೋಪಿಯನ್ನು ಹಿಡಿದು ಚೆನ್ನಾಗಿ ಥಳಿಸಿದ ಬಳಿಕ ಪೊಲೀಸರಿಗೆ ಒಪ್ಪಿಸಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

