ನವದೆಹಲಿ: 2020ರ ದೆಹಲಿ ಕೋಮು ಗಲಭೆ ವೇಳೆ ಗುಪ್ತಚರ ಇಲಾಖೆ (ಐಬಿ) ಅಧಿಕಾರಿ ಅಂಕಿತ್ ಶರ್ಮ ಅವರನ್ನು ಕ್ರೂರವಾಗಿ ಹತ್ಯೆ ಮಾಡಿದ ಪ್ರಕರಣದಲ್ಲಿ, ಆಮ್ ಆದ್ಮಿ ಪಕ್ಷದ ಮಾಜಿ ಕೌನ್ಸಿಲರ್ ತಾರ್ ಹುಸೇನ್ ಅವರಿಗೆ ದೆಹಲಿಯ ಕರಕರ್‌ದೂಮಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ
ಶಿಕ್ಷೆ ಪ್ರಕಟಿಸಿದ ವೇಳೆ ನ್ಯಾಯಾಲಯವು, ಈ ಕೊಲೆ ಅತ್ಯಂತ ಅಮಾನವೀಯ ಮತ್ತು ಕ್ರೂರ ರೀತಿಯಲ್ಲಿ ನಡೆದಿದ್ದು, ಹತ್ಯೆಯ ನಂತರವೂ ಮೃತದೇಹವನ್ನು ಚರಂಡಿಗೆ ಎಸೆದು ಅಪರಾಧಿಗಳು ದ್ವೇಷವನ್ನು ಪ್ರದರ್ಶಿಸಿದ್ದಾರೆ ಎಂದು ತೀವ್ರವಾಗಿ ಖಂಡಿಸಿತು. ಪ್ರಕರಣವು “ಅಪರೂಪದಲ್ಲಿ ಅಪರೂಪದ” ಸ್ವರೂಪದ್ದಾಗಿದ್ದರೂ, ಅಪರಾಧಿಯು ಸುಧಾರಿಸಬಹುದಾದ ಸಾಧ್ಯತೆ, ಕೋಮು ಉದ್ವಿಗ್ನತೆಯ ಸಂದರ್ಭದ ತಪ್ಪು ಮಾಹಿತಿ ಮತ್ತು ಇತರ ಅಂಶಗಳನ್ನು ಪರಿಗಣಿಸಿ ಗಲ್ಲು ಶಿಕ್ಷೆಯ ಬದಲಿಗೆ ಕಠಿಣ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ ಎಂದು ನ್ಯಾಯಾಲಯ ತಿಳಿಸಿದೆ. ಪ್ರಕರಣದ ಹಿನ್ನೆಲೆ: 2020ರ ಫೆಬ್ರವರಿಯಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಕೋಮು ಗಲಭೆಯ ವೇಳೆ ಐಬಿ ಅಧಿಕಾರಿ ಅಂಕಿತ್ ಶರ್ಮಾ ಅವರನ್ನು ದುಷ್ಕರ್ಮಿಗಳ ಗುಂಪು ಹತ್ಯೆ ಮಾಡಿತ್ತು. ಬಳಿಕ ಅವರ ಮೃತದೇಹ ಸಮೀಪದ ಚರಂಡಿಯಲ್ಲಿ ಪತ್ತೆಯಾಗಿದ್ದು, ಈ ಘಟನೆ ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಸುದೀರ್ಘ ನ್ಯಾಯಾಂಗ ಪ್ರಕ್ರಿಯೆಯ ಬಳಿಕ ಇದೀಗ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ತಾಹಿರ್ ಹುಸೇನ್ ಹಾಗೂ ಇತರರಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

