ರೌಡಿ ಶೀಟರ್ ಜೊತೆ ‘ಡೀಲ್’ ಆರೋಪ..! ಪೊಲೀಸ್ ಇನ್ಸ್ಪೆಕ್ಟರ್ ಮತ್ತು ಕ್ರೈಂ ಸಿಬ್ಬಂದಿಯನ್ನು ಸಸ್ಪೆಂಡ್ ಮಾಡಬೇಕು..
ರೌಡಿಗಳಿಗೆ ಪೊಲೀಸ್ ಸಪೋರ್ಟ್ ಆರೋಪ..!ಇನ್ಸ್ಪೆಕ್ಟರ್–ಕ್ರೈಂ ಸಿಬ್ಬಂದಿ ಅಮಾನತಿಗೆ ಮಾಜಿ ಕಾರ್ಪೋರೇಟರ್ ಆಗ್ರಹ
ದುಡ್ಡು ಕೊಟ್ಟರೆ ಎಲ್ಲವೂ ಉಲ್ಟಾ ಪಲ್ಟಾ..! ಟೌನ್ ಠಾಣೆ ಇನ್ಸ್ಪೆಕ್ಟರ್–ಕ್ರೈಂ ಸಿಬ್ಬಂದಿ ಸಸ್ಪೆಂಡ್‌ಗೆ ಆಗ್ರಹ..
ಹುಬ್ಬಳ್ಳಿ: ಜನರ ಜೀವ ಹಾಗೂ ಆಸ್ತಿಗೆ ರಕ್ಷಣೆ ನೀಡಬೇಕಾದ ಕಾನೂನು ಪಾಲಕರೇ ರೌಡಿ ಶೀಟರ್‌ಗಳೊಂದಿಗೆ ಶಾಮೀಲಾದರೆ, ಸಾಮಾನ್ಯ ನಾಗರಿಕರ ಸುರಕ್ಷತೆ ಹೇಗೆ..?
ಹುಬ್ಬಳ್ಳಿಯಲ್ಲಿ ರೈಲ್ವೇ ಉದ್ಯೋಗಿಯೊಬ್ಬರ ಮೇಲೆ ರೌಡಿ ಶೀಟರ್ ಚಾಕುವಿನಿಂದ ಹಲ್ಲೆ ನಡೆಸಿದ ಪ್ರಕರಣದ ಬೆನ್ನಲ್ಲೇ, ಶಹರ ಪೊಲೀಸ್ ಠಾಣೆಯ ಕ್ರೈಂ ಸಿಬ್ಬಂದಿ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ…
ಕಳೆದ ಒಂದು ವಾರದ ಹಿಂದೆ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೈಲ್ವೇ ಉದ್ಯೋಗಿ ಅಭಿಷೇಕ್ ಎಂಬುವರ ಮೇಲೆ ಕ್ಷುಲ್ಲಕ ವಿಚಾರಕ್ಕೆ ರೌಡಿ ಶೀಟರ್ ಸಾಮೆಲ್ ಗೋನಾ ಎಂಬಾತ ಚಾಕುವಿನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ…
ಆದರೆ ಹಲ್ಲೆ ನಡೆಯುವ ಮುನ್ನವೇ ಹಲವು ಬಾರಿ ಪೊಲೀಸ್ ಠಾಣೆಗೆ ದೂರು ನೀಡಲು ತೆರಳಿದ್ದರೂ, ಪೊಲೀಸರು ಸೂಕ್ತವಾಗಿ ಸ್ಪಂದಿಸಿರಲಿಲ್ಲ ಎಂಬ ಗಂಭೀರ ಆರೋಪ ಕೇಳಿಬಂದಿದೆ…
ಈ ಕುರಿತು ಮಾತನಾಡಿರುವ ಪಾಲಿಕೆಯ ಮಾಜಿ ಕಾರ್ಪೋರೇಟರ್ ಸುಧಾ ಮನಿಕುಂಡ್ಲಾ, ಶಹರ ಠಾಣೆಯ ಕ್ರೈಂ ಸಿಬ್ಬಂದಿ ಸೇರಿದಂತೆ ಕೆಲ ಪೊಲೀಸರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ರೌಡಿ ಶೀಟರ್‌ಗಳಿಂದ ಹಣ ಪಡೆದು ಅವರಿಗೆ ಪೊಲೀಸ್ ಸಿಬ್ಬಂದಿ ಬೆಂಬಲ ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ…
ಹಲ್ಲೆಗೊಳಗಾದ ಅಭಿಷೇಕ್ ಅವರ ಸಹೋದರಿಯ ಹೇಳಿಕೆಯ ಪ್ರಕಾರ, ಈ ರೌಡಿ ಶೀಟರ್‌ಗಳು ಹಿಂದೆಯೂ ತಮ್ಮ ಕುಟುಂಬದ ಮೇಲೆ ಹಲ್ಲೆಗೆ ಯತ್ನಿಸಿದ್ದರು. ಈ ಕುರಿತು ಶಹರ ಠಾಣೆಗೆ ದೂರು ನೀಡಿದ್ದರೂ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಳ್ಳಲಿಲ್ಲ. ಪೊಲೀಸರ ಬೆಂಬಲವಿದೆ ಎಂಬ ಧೈರ್ಯದಿಂದಲೇ ಆರೋಪಿಗಳು ಮನೆಗೆ ಬಂದು ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ…
ಇದೇ ವೇಳೆ, ದೂರು ನೀಡಲು ಪೊಲೀಸ್ ಠಾಣೆಗೆ ತೆರಳುವ ಅಮಾಯಕರ ಮೇಲೆಯೇ ಬೆದರಿಕೆ ಹಾಕುವುದು, ರೌಡಿ ಶೀಟರ್‌ಗಳೊಂದಿಗೆ ಶಾಮೀಲಾಗಿ ಅಕ್ರಮ ಹಣ ವಸೂಲಿ ಮಾಡುವುದು, ಭೂ ವ್ಯವಹಾರಗಳಲ್ಲಿ ಸಾಥ್ ನೀಡುವುದು ಹಾಗೂ ಸಂತ್ರಸ್ತರನ್ನೇ ಬೆದರಿಸುವಂತಹ ಆರೋಪಗಳು ನಗರದ ಕೆಲವೆಡೆ ಕೇಳಿಬರುತ್ತಿವೆ…
ಜನರಿಗೆ ಸಂಕಷ್ಟ ಬಂದಾಗ ರಕ್ಷಣೆಗಾಗಿ ಮೊರೆ ಹೋಗುವುದು ಪೊಲೀಸರನ್ನು. ಆದರೆ ರಕ್ಷಿಸಬೇಕಾದವರೇ ಅಪರಾಧಿಗಳ ಪರ ನಿಂತಿದ್ದಾರೆ ಎಂಬ ಆರೋಪಗಳು ಕೇಳಿಬಂದರೆ, ಸಾಮಾನ್ಯ ನಾಗರಿಕರು ನ್ಯಾಯಕ್ಕಾಗಿ ಯಾರ ಬಳಿ ಹೋಗಬೇಕು..?
ಎಂಬ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಎದ್ದಿದೆ… ಈ ಆರೋಪಗಳ ಕುರಿತು ಪೊಲೀಸ್ ಇಲಾಖೆಯಿಂದ ಸ್ಪಷ್ಟ ತನಿಖೆ ನಡೆಸಿ, ಆರೋಪಗಳು ಸತ್ಯವೇ ಅಥವಾ ಸುಳ್ಳೇ ಎಂಬುದನ್ನು ಬಹಿರಂಗಪಡಿಸಬೇಕೆಂಬ ಆಗ್ರಹವೂ ಕೇಳಿಬರುತ್ತಿದೆ…
bigtvnews | Hubli Dharwad News | Kannada News | Karnataka News Hubli News | News In Hubli | Local news

