Breaking News

ಜೆಪ್ಟೊ ಸಿಬ್ಬಂದಿಯಿಂದ ಕಿರುಕುಳ: ಒಬ್ಬಂಟಿ ಮಹಿಳೆ ಕಂಡು ಮನೆಯೊಳಗೆ ನುಗ್ಗಲು ಪ್ರಯತ್ನಿಸಿದ ಡೆಲಿವರಿ ಬಾಯ್

ನವದೆಹಲಿ: ಜೆಪ್ಟೊ ಡೆಲಿವರಿ ಏಜೆಂಟ್ ವಿರುದ್ಧ ಮಹಿಳೆಯೊಬ್ಬರು ಕಿರುಕುಳದ ಆರೋಪ ಮಾಡಿದ್ದು, ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆರ್ಡರ್ ತಲುಪಿಸಿದ ಬಳಿಕ ಏಜೆಂಟ್ ಕುಡಿಯಲು ನೀರು ಕೇಳಿದ್ದು, ನೀರಿನ ಬಾಟಲಿ ನೀಡಿದರೂ ಮನೆ ಒಳಗೆ ಬರಲು ಪದೇಪದೆ ಪ್ರಯತ್ನಿಸಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ. ಮಹಿಳೆ ಹೊರಗಡೆ ಕಾಯುವಂತೆ ಹೇಳಿದರೂ ಆತ ಕೇಳದೆ ಮನೆಯೊಳಗೆ ಬರಲು ಮುಂದಾಗಿದ್ದಾನೆ. ಇದರಿಂದ ಭಯಗೊಂಡ ಅವರು ಗೇಟ್ ಹಾಗೂ ಮುಖ್ಯ ಬಾಗಿಲು ಮುಚ್ಚಲು ಯತ್ನಿಸಿದಾಗ, ಬಾಗಿಲು ಬಡಿದು ಕಿರುಕುಳ ನೀಡಿದ್ದಾನೆ ಎಂದು ವಿಡಿಯೊದಲ್ಲಿ ತಿಳಿಸಿದ್ದಾರೆ. ಘಟನೆಗೆ ಪ್ರತಿಕ್ರಿಯಿಸಿರುವ ಜೆಪ್ಟೊ, ಪ್ರಕರಣದ ತನಿಖೆ ನಡೆಸಲು ಆರ್ಡರ್ ವಿವರಗಳನ್ನು ಹಂಚಿಕೊಳ್ಳುವಂತೆ ಮಹಿಳೆಯನ್ನು ಕೋರಿದೆ. ವಿಡಿಯೊ ವೈರಲ್ ಆಗುತ್ತಿದ್ದಂತೆ, ಗ್ರಾಹಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿ ಡೆಲಿವರಿ ಸಿಬ್ಬಂದಿಯ ಹಿನ್ನೆಲೆ ಪರಿಶೀಲನೆ ಕಡ್ಡಾಯಗೊಳಿಸಬೇಕು ಎಂದು ಹಲವರು ಒತ್ತಾಯಿಸಿದ್ದಾರೆ.

Share News

About BigTv News

Check Also

ಅಪ್ರಾಪ್ತ ವಯಸ್ಕ ಬಾಲಕಿ ಮೇಲಿನ ದೌರ್ಜನ್ಯ ಕೇಸ್: ಗ್ರಾಮದಲ್ಲಿ ಉದ್ವಿಗ್ನ ವಾತಾವರಣ, ಆರೋಪಿ ಮನೆ ಮೇಲೆ ದಾಳಿ

ಮುಂಡಗೋಡ: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಗರ್ಭಿಣಿಯಾಗಿಸಿದ ಆರೋಪದ ಮೇಲೆ 65 ವರ್ಷದ ವೃದ್ಧನನ್ನು ಪೊಲೀಸರು ಬಂಧಿಸಿದ್ದಾರೆ. …

Leave a Reply

Your email address will not be published. Required fields are marked *