ದೊಡ್ಡಬಳ್ಳಾಪುರದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಜೊತೆಯಾಗಿ ಕುಳಿತಿದ್ದ ಜೋಡಿಯನ್ನು ಹಿಂಬಾಲಿಸಿದ ಪುಂಡರ ಗುಂಪು ಖಾಸಗಿ ಬ್ಯಾಟರಿ ತಯಾರಿಕಾ ಘಟಕಕ್ಕೆ ನುಗ್ಗಿ ಹಲ್ಲೆ ನಡೆಸಿದೆ. ಉದ್ಯಮಿ, ಸಿಬ್ಬಂದಿ ಹಾಗೂ ಮಹಿಳೆಯ ಮೇಲೂ ಹಲ್ಲೆ ಮತ್ತು ದೌರ್ಜನ್ಯ ಎಸಗಿರುವ ಆರೋಪ ಕೇಳಿಬಂದಿದೆ. ಆರೋಪಿಗಳು ಕಾರು, ಸಿಸಿಟಿವಿ ಸೇರಿದಂತೆ ಫ್ಯಾಕ್ಟರಿಯ ಆಸ್ತಿಪಾಸ್ತಿಗಳನ್ನು ಧ್ವಂಸಗೊಳಿಸಿ ಜೀವ ಬೆದರಿಕೆ ಹಾಕಿ ಪರಾರಿಯಾಗಿದ್ದರು. ಘಟನೆಯ ಬಳಿಕ ಪ್ರಕರಣ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಪ್ರಕರಣ ದಾಖಲಿಸಿಕೊಂಡ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು 12 ಆರೋಪಿಗಳನ್ನು ಬಂಧಿಸಿದ್ದು, ಉಳಿದ ಆರೋಪಿಗಳ ಪತ್ತೆಗೆ ತನಿಖೆ ಮುಂದುವರಿದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

