ಬೆಂಗಳೂರು ನಗರದ 82 ವರ್ಷದ ಪಾರ್ಥಸಾರಥಿ ಎಂಬುವವರಿಗೆ ಚುನಾವಣಾ ಆಯೋಗದ ಅಧಿಕಾರಿ ಎಂದು ಕರೆ ಮಾಡಿದ ಸೈಬರ್ ವಂಚಕ, SIR ಅರ್ಜಿ ತಿರಸ್ಕೃತವಾಗಿದೆ ಎಂದು ನಂಬಿಸಿ ವಾಟ್ಸ್‌ಆಯಪ್ ಮೂಲಕ ಲಿಂಕ್ ಕಳುಹಿಸಿದ್ದ. ಅದರಲ್ಲಿ ವೈಯಕ್ತಿಕ ಮಾಹಿತಿ ಭರ್ತಿ ಮಾಡಿ ₹5 ನೋಂದಣಿ ಶುಲ್ಕ ಪಾವತಿಸುವಂತೆ ಸೂಚಿಸಿದ್ದಾನೆ. ವೃದ್ಧರು ₹5 ಪಾವತಿಸಲು ಪ್ರಯತ್ನಿಸಿದಾಗ ವಹಿವಾಟು ವಿಫಲವಾಗಿದೆ ಎಂದು ತೋರಿಸಿದೆ. ಬಳಿಕ ಕ್ಯೂಆರ್ ಕೋಡ್ ಕಳುಹಿಸುವುದಾಗಿ ಹೇಳಿದ ವಂಚಕ, ಅವರ ಕ್ರೆಡಿಟ್ ಕಾರ್ಡ್‌ನಿಂದ ಹಂತ ಹಂತವಾಗಿ ಒಟ್ಟು ₹3,49,999 ಹಣ ದೋಚಿದ್ದಾನೆ. ಘಟನೆ ಬಳಿಕ ಜೀವನ್ ಭೀಮಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಂಚಕರ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

