Breaking News

ಹೆಬ್ರಿಯ ಸೀತಾನದಿ ಕೂಡ್ಲು ಫಾಲ್ಸ್‌ನಲ್ಲಿ ಜಾರಿ ಬಿದ್ದಿದ್ದ ಬೆಂಗಳೂರಿನ ಯುವಕ ಸಾವು

ಹೆಬ್ರಿಯ ಸೀತಾನದಿ ಕೂಡ್ಲು ಫಾಲ್ಸ್‌ನಲ್ಲಿ ಬಂಡೆಕಲ್ಲಿನಿಂದ ಜಾರಿಬಿದ್ದು ಗಂಭೀರ ಗಾಯಗೊಂಡಿದ್ದ ಯುವಕ ಚಿಕಿತ್ಸೆಗೆ ಸ್ಪಂದಿಸದೆ ಬುಧವಾರ ಮೃತಪಟ್ಟಿದ್ದಾರೆ.ತಾಲ್ಲೂಕಿನ ಆರ್ಡಿ ಕೊಂಜಾಡಿಯ ಮನ್ವಿತ್‌ (25) ತನ್ನ ಪೋಷಕರೊಂದಿಗೆ ಬೆಂಗಳೂರಿನಲ್ಲಿ ವಾಸವಿದ್ದು ಡಿಸೆಂಬರ್‌ 12ರಂದು ಕೊಂಜಾಡಿಗೆ ಬಂದಿದ್ದರುಡಿಸೆಂಬರ್‌ 14ರಂದು ಸ್ನೇಹಿತರೊಂದಿಗೆ ಕೂಡ್ಲು ಫಾಲ್ಸ್‌ ಗೆ ತೆರಳಿದ್ದರು. ಸ್ನೇಹಿತರು ಸ್ನಾನ ಮಾಡುವಾಗ ಮನ್ವಿತ್‌ ಎತ್ತರದ ಬಂಡೆಯ ಮೇಲೆ ಕುಳಿತುಕೊಂಡಿದ್ದು ಆಕಸ್ಮಿತವಾಗಿ ಜಾರಿ ಬಿದ್ದು ತಲೆಗೆ ಗಂಭೀರವಾಗಿ ಗಾಯಗೊಂಡಿದ್ದರು. ಮನ್ವಿತ್‌ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

ಕೋಲಾರದಲ್ಲಿ ರೈತರು-ಅರಣ್ಯ ಇಲಾಖೆ ಮಧ್ಯೆ ಸಂಘರ್ಷ: ಸಿಬ್ಬಂದಿ ಮೇಲೆ ಮಚ್ಚಿನಿಂದ ಅಟ್ಯಾಕ್‌

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮಲ್ಲಂಪಲ್ಲಿ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆ ನಡೆದಿದ್ದು, ಮೂವರು ಗಂಭೀರವಾಗಿ …

Leave a Reply

Your email address will not be published. Required fields are marked *