Breaking News

ಬಾಣಂತಿಯ ಆರೈಕೆಗೆ ಆಗಮಿಸಿದ ಯುವತಿಯ ದುಷ್ಕೃತ್ಯ: ನಗ್ನ ದೃಶ್ಯ ಚಿತ್ರೀಕರಿಸಿ ಹಂಚಿಕೆ

ಕಾಸರಗೋಡು: ಬಾಣಂತಿಯ ಆರೈಕೆಗೆ ಬಂದಿದ್ದ 25 ವರ್ಷದ ಕರ್ನಾಟಕ ಮೂಲದ ಸುಲೈಖಾ ರಾಸಿಯಾ ಎಂಬ ಯುವತಿ, ಮಹಿಳೆಯ ನಗ್ನ ದೃಶ್ಯಗಳನ್ನು ರಹಸ್ಯವಾಗಿ ಚಿತ್ರೀಕರಿಸಿ ವಾಟ್ಸ್‌ಆಯಪ್ ಮೂಲಕ ಹಲವರಿಗೆ ಹಂಚಿದ ಆರೋಪದ ಮೇಲೆ ಕಾಸರಗೋಡು ನಗರ ಪೊಲೀಸರು ಬಂಧಿಸಿದ್ದಾರೆ. ಸೆ.7ರಿಂದ 20ರ ನಡುವೆ ಆರೈಕೆಯ ನೆಪದಲ್ಲಿ ರಹಸ್ಯ ಕ್ಯಾಮೆರಾ ಬಳಸಿ ದೃಶ್ಯಗಳನ್ನು ಚಿತ್ರೀಕರಿಸಿ ಹಂಚಿಕೊಂಡಿರುವುದಾಗಿ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ದೃಶ್ಯಗಳನ್ನು ಪಡೆದವರಲ್ಲಿ ಆರೋಪಿಯ ಪತಿಯೂ ಸೇರಿದ್ದಾನೆ ಎನ್ನಲಾಗಿದೆ. ಆರೋಪಿಯ ಮೊಬೈಲ್ ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದ್ದು, ಬಳಿಕ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಮಹಿಳೆಯನ್ನು ಬ್ಲ್ಯಾಕ್‌ಮೇಲ್ ಮಾಡುವ ಉದ್ದೇಶದಿಂದ ಇತರರೊಂದಿಗೆ ಸೇರಿ ಕೃತ್ಯ ಎಸಗಲಾಗಿದೆಯೇ ಎಂಬ ಶಂಕೆಯಿದ್ದು, ಈ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Share News

About BigTv News

Check Also

ಅಕ್ರಮ ಜಾನುವಾರು ಸಾಗಾಟ ಜಾಲ ಭೇದಿಸಿದ ಪೊಲೀಸರು, 17 ಜಾನುವಾರುಗಳ ರಕ್ಷಣೆ

ಮಂಗಳೂರು: ಅಕ್ರಮವಾಗಿ ಹಾಗೂ ಹಿಂಸಾತ್ಮಕ ರೀತಿಯಲ್ಲಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಲಾರಿಯನ್ನು ಕಂಕನಾಡಿ ನಗರ ಪೊಲೀಸರು ತಡೆದು, 17 ಜಾನುವಾರುಗಳನ್ನು ರಕ್ಷಿಸಿದ್ದಾರೆ. …

Leave a Reply

Your email address will not be published. Required fields are marked *