Breaking News

ರಾಯಚೂರು ಉಗ್ರನ ಬಂಧನ ಪ್ರಕರಣ – ಇನ್ಸ್ಟಾ ಚಾಟಿಂಗ್ ನಲ್ಲಿ ಆತಂಕಕಾರಿ ಮಾಹಿತಿ ಬಯಲು!

ರಾಯಚೂರು: ದೇಶದಲ್ಲಿ ದೊಡ್ಡ ಮಟ್ಟದ ಗಲಭೆ ಸೃಷ್ಟಿಸಲು ಸಂಚು ರೂಪಿಸಿ, ಅರಬ್ ಮೂಲದ ವ್ಯಕ್ತಿಯೊಂದಿಗೆ ಇನ್‌ಸ್ಟಾಗ್ರಾಂನಲ್ಲಿ ಪ್ರಚೋದನಕಾರಿ ಚರ್ಚೆ ನಡೆಸುತ್ತಿದ್ದ ಆರೋಪದ ಮೇಲೆ ರಾಯಚೂರಿನ 24 ವರ್ಷದ ಮೊಹಮ್ಮದ್ ಶಾಹಿಲ್‌ನನ್ನು ಪೊಲೀಸರು ಬಂಧಿಸಿದ್ದಾರೆ. ರಾಷ್ಟ್ರೀಯ ಭದ್ರತೆಗೆ ಧಕ್ಕೆ ತಂದ ಆರೋಪದಡಿ ಬಂಧಿತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ರಾಯಚೂರು ನಗರದಲ್ಲಿ ಟೀ ಅಂಗಡಿ ನಡೆಸುತ್ತಿದ್ದ ಶಾಹಿಲ್, ‘ರಾಣಾ ಭಾಯ್’ ಹೆಸರಿನ ಇನ್‌ಸ್ಟಾಗ್ರಾಂ ಖಾತೆ ಮೂಲಕ ಅರಬ್ ಮೂಲದ ವ್ಯಕ್ತಿಯ ಸಂಪರ್ಕಕ್ಕೆ ಬಂದಿದ್ದ ಎನ್ನಲಾಗಿದೆ. ಜುಲೈ 14ರಿಂದ ಇಬ್ಬರ ನಡುವೆ ನಿರಂತರ ಚಾಟಿಂಗ್ ನಡೆದಿದ್ದು, ಭಾರತದಲ್ಲಿ ಅಶಾಂತಿ ಹಾಗೂ ಗಲಭೆ ಸೃಷ್ಟಿಸುವ ಕುರಿತು ಚರ್ಚೆ ನಡೆಸುತ್ತಿದ್ದ ಆರೋಪ ಕೇಳಿಬಂದಿದೆ. ಚಾಟಿಂಗ್ ವೇಳೆ ಗಲಭೆ ಸೃಷ್ಟಿಸಲು ಅಗತ್ಯವಿರುವಷ್ಟು ಹಣ ನೀಡುವುದಾಗಿ ಹಾಗೂ ಪಿಸ್ತೂಲ್ ಪೂರೈಸುವುದಾಗಿ ಅರಬ್ ಮೂಲದ ವ್ಯಕ್ತಿ ಆಫರ್ ನೀಡಿದ್ದ ಎನ್ನಲಾಗಿದೆ. ಚಾಟಿಂಗ್ ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಶಾಹಿಲ್‌ನನ್ನು ಬಂಧಿಸಿದ್ದಾರೆ. ಈ ಜಾಲದ ಹಿಂದೆ ಮತ್ತಾರಾದರೂ ಇದ್ದಾರೆಯೇ ಹಾಗೂ ಅರಬ್ ವ್ಯಕ್ತಿಯ ಹಿನ್ನೆಲೆ ಏನು ಎಂಬುದರ ಕುರಿತು ತನಿಖೆ ಮುಂದುವರಿದಿದೆ.

Share News

About BigTv News

Check Also

ಯುವತಿ ಕುತ್ತಿಗೆಗೆ ಚಾಕು ಇಟ್ಟು ಸರ ದರೋಡೆ ಯತ್ನ: ಕಿಡಿಗೇಡಿ ಬಂಧನ

ಬೆಂಗಳೂರು: ಇಂದಿರಾನಗರದ ಅಂಗಡಿಯೊಂದಕ್ಕೆ ನುಗ್ಗಿ ಯುವತಿಯ ಕುತ್ತಿಗೆಗೆ ಚಾಕು ಇಟ್ಟು ಚಿನ್ನದ ಸರ ದರೋಡೆಗೆ ಯತ್ನಿಸಿದ ಪ್ರಭುರಾಜ್ (40) ಎಂಬಾತನನ್ನು …

Leave a Reply

Your email address will not be published. Required fields are marked *