Breaking News
Featured Video Play Icon

ಗಾಂಜಾ ಜಾಲ ಬುಡ ಸಮೇತ ಪತ್ತೆ ಹಚ್ಚುತ್ತೆವೆ…

ನಗರದ ಒಳಗೆ ಗಾಂಜಾ ಬಂದ ಬಗ್ಗೆ ಟೆಕ್ನಿಕಲ್ ಟೀಮ್ ನಿಂದ ಪರಿಶೀಲನೆ..

ಖಡಕ್ ಆಫಿಸರ್ ಬಂದ ಮೇಲೆ ಹತೋಟಿಗೆ ಬರುತ್ತಿರುವ ಅಕ್ರಮಗಳು..

ಹುಬ್ಬಳ್ಳಿ: ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಹಳೇಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಪೊಲೀಸರು 12 ಜನರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ಸಿಕ್ಕಿಬಿದ್ದ ಆರೋಪಿಗಳುಇಲ್ಲಿನ ಅರವಿಂದನಗರ ಪಿ & ಟಿ ಕ್ವಾಟರ್ಸ್ ಪಾಳು ಬಿದ್ದ ಕಟ್ಟಡದಲ್ಲಿ ಗಾಂಜಾ ಮಾದಕ ಪದಾರ್ಥವನ್ನು ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಸಿಗುತ್ತಿದ್ದಂತೆಯೇ ಹಳೇಹುಬ್ಬಳ್ಳಿಯ ಪೊಲೀಸ್ ಠಾಣೆಯ ಪೋಲಿಸರು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಜು.24 ರಂದು ರಾತ್ರಿ 10.30 ಕ್ಕೆ ದಾಳಿ ಮಾಡಿದ್ದಾರೆ.ಈ ವೇಳೆ ಹಳೇಹುಬ್ಬಳ್ಳಿ ಗೋಡಕೆ ಪ್ಲಾಟ್ ನಿವಾಸಿ ಅಭಿಷೇಕ ಹನಮಂತ, ಗಣೇಶಪೇಟೆಯ ಮಹ್ಮದ್ ಅಯಾಜ್, ಈಶ್ವರನಗರದ ಇಸ್ಮಾಯಿಲ್, ಆನಂದನಗರದ ಜಾಫರ್ ಅಲಿಯಾಸ್ ಬಾಂಬೆ ಜಾಫರ್, ಮಹಮ್ಮದ್ ಸಾಧೀಕ್,‌ ರೋಶನ್ ಸೋಯಬ ಅಲಿಯಾಸ್ ಬಲ್ಲೂ ಜಮೀಲಾಹ್ಮದ್, ಸದರಸೋಪಾದ ಜುಬೇರಹ್ಮದ್, ಘೋಡಕೆ ಪ್ಲಾಟ್’ನ ಪುರಕಾನ್, ಅಜ್ಮೀರ್ ನಗರದ ಶಾನವಾಜ್, ಮೆಹಬೂಬನಗರದ ಸಲೀಂ, ಕರೀಂ ಬಂಧಿತರಾಗಿದ್ದಾರೆ. ಇವರಿಂದ ಒಟ್ಟು 1ಲಕ್ಷ ಮೌಲ್ಯದ 1 ಕೆಜಿ 365 ಗ್ರಾಂ ಗಾಂಜಾ, 2 ಸಾವಿರ ನಗದು, 3 ದ್ವಿ ಚಕ್ರ ವಾಹನ ಹಾಗೂ 9 ಮೊಬೈಲ್ ವಶಪಡಿಸಿಕೊಂಡು, ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ

Share News

About Shaikh BigTv

Check Also

ಇಬ್ಬರ ಜಗಳ ಬಿಡಿಸಲು ಹೋದ ಯುವಕನ ಕತ್ತು ಸೀಳಿ ಭೀಕರ ಕೊಲೆ!

ಮಂಡ್ಯ: ಹಣಕಾಸಿನ ವಿಚಾರವಾಗಿ ನಡೆಯುತ್ತಿದ್ದ ಗಲಾಟೆಯನ್ನು ಬಿಡಿಸಲು ಹೋದ 25 ವರ್ಷದ ನಂದನ್ ಎಂಬ ಯುವಕನನ್ನು ಡ್ರ್ಯಾಗರ್‌ನಿಂದ ಕತ್ತು ಸೀಳಿ …

Leave a Reply

Your email address will not be published. Required fields are marked *