Breaking News

ಕೇವಲ ₹20 ವಿದ್ಯುತ್ ಬಿಲ್ ಪಾವತಿಸಲು ಹೋಗಿ ₹1.99 ಲಕ್ಷ ಕಳೆದುಕೊಂಡ 71 ವರ್ಷದ ವ್ಯಕ್ತಿ!

ಬೆಂಗಳೂರು: ₹20 ವಿದ್ಯುತ್ ಬಿಲ್ ಪಾವತಿಸಲು ಮುಂದಾದ 71 ವರ್ಷದ ವ್ಯಕ್ತಿಯೊಬ್ಬರು ಸೈಬರ್ ವಂಚಕರ ಬಲೆಗೆ ಬಿದ್ದು ₹1.99 ಲಕ್ಷ ಕಳೆದುಕೊಂಡ ಘಟನೆ ನಡೆದಿದೆ. ವಿದ್ಯುತ್ ಸಂಪರ್ಕ ಕಡಿತಗೊಳ್ಳಲಿದೆ ಎಂಬ ಸಂದೇಶ ನಂಬಿ ನಕಲಿ ಆಯಪ್ ಡೌನ್‌ಲೋಡ್ ಮಾಡಿದ ಬಳಿಕ ಅವರ ಎಸ್‌ಬಿಐ ಖಾತೆಯಿಂದ ಅನಧಿಕೃತ ವಹಿವಾಟು ನಡೆದಿದೆ. ವಂಚನೆ ಗೊತ್ತಾದ ತಕ್ಷಣ ಬ್ಯಾಂಕ್ ಹಾಗೂ ಪೊಲೀಸರಿಗೆ ದೂರು ನೀಡಿದ್ದರೂ, ಎಸ್‌ಬಿಐ ₹1.99 ಲಕ್ಷ ಮರುಪಾವತಿಸಲು ನಿರಾಕರಿಸಿತ್ತು. ಗ್ರಾಹಕ ಆಯೋಗಗಳು ಬ್ಯಾಂಕ್‌ನ ವಾದ ತಿರಸ್ಕರಿಸಿ, ಗ್ರಾಹಕರ ನಿರ್ಲಕ್ಷ್ಯ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿವೆ. NCDRC ಕೂಡ ಎಸ್‌ಬಿಐ ಮೇಲ್ಮನವಿ ತಿರಸ್ಕರಿಸಿ, ₹1.99 ಲಕ್ಷ ಮರುಪಾವತಿಸುವಂತೆ ಹಾಗೂ ₹25 ಸಾವಿರ ಪರಿಹಾರ ನೀಡುವಂತೆ ಆದೇಶಿಸಿದೆ. ವಿದ್ಯುತ್ ಬಿಲ್ ಸೇರಿದಂತೆ ಯಾವುದೇ ಸೇವೆಯ ಹೆಸರಿನಲ್ಲಿ ಬರುವ ಅಪರಿಚಿತ ಲಿಂಕ್‌ಗಳು, ಮೊಬೈಲ್ ಸಂಖ್ಯೆಗಳು ಅಥವಾ ಆಯಪ್‌ಗಳನ್ನು ಪರಿಶೀಲಿಸದೆ ಬಳಸಬಾರದು ಎಂದು ಎಚ್ಚರಿಕೆ ನೀಡಲಾಗಿದೆ.

Share News

About BigTv News

Check Also

ಮಸೀದಿ ಮುಂದೆ ಗಣೇಶನ ಮೂರ್ತಿ ಹೋದ್ರೆ ಗ್ರಹಚಾರ ಬಿಡಿಸ್ತೀನಿ” ; ಇನ್‌ಸ್ಪೆಕ್ಟರ್ ಧಮ್ಕಿ

ಮೈಸೂರು: ಗಣೇಶೋತ್ಸವದ ವೇಳೆ ಮೆರವಣಿಗೆ ನಡೆಸುವ ವಿಚಾರಕ್ಕೆ ಸಂಬಂಧಿಸಿದಂತೆ ಟಿ. ನರಸೀಪುರ ಇನ್ಸ್‌ಪೆಕ್ಟರ್ ಧನಂಜಯ ನೀಡಿರುವ ಎಚ್ಚರಿಕೆ ಚರ್ಚೆಗೆ ಕಾರಣವಾಗಿದೆ. …

Leave a Reply

Your email address will not be published. Required fields are marked *