Breaking News

ಯಲಹಂಕ ಭಾಗದಲ್ಲಿ ನಕಲಿ ನೋಟುಗಳ ಹಾವಳಿ

ಯಲಹಂಕ: ರಾಜಾನುಕುಂಟೆ ಹಾಗೂ ದೊಡ್ಡಬಳ್ಳಾಪುರ ಭಾಗದಲ್ಲಿ ₹100 ಮತ್ತು ₹500 ಮುಖಬೆಲೆಯ ನಕಲಿ ನೋಟುಗಳ ಹಾವಳಿ ಹೆಚ್ಚಾಗಿದ್ದು, ವ್ಯಾಪಾರಿಗಳು ಹಾಗೂ ಸಾರ್ವಜನಿಕರಲ್ಲಿ ಆತಂಕ ಮೂಡಿದೆ. ಪೆಟ್ರೋಲ್‌ ಬಂಕ್‌, ತರಕಾರಿ ಹಾಗೂ ಕಿರಾಣಿ ಅಂಗಡಿಗಳಲ್ಲಿ ನಕಲಿ ನೋಟು ಚಲಾವಣೆಯಾಗುತ್ತಿದೆ. ವಹಿವಾಟಿನ ವೇಳೆ ಅಸಲಿ ನೋಟಿನಂತೆ ಕಂಡುಬರುವುದರಿಂದ ವ್ಯಾಪಾರಿಗಳಿಗೆ ತಕ್ಷಣ ಗುರುತಿಸಲು ಸಾಧ್ಯವಾಗುತ್ತಿಲ್ಲ. ಬ್ಯಾಂಕ್‌ಗೆ ಹಣ ಠೇವಣಿ ಮಾಡುವಾಗ ನಕಲಿ ನೋಟು ಎಂಬುದು ಪತ್ತೆಯಾಗುತ್ತಿದ್ದು, ಇದರಿಂದ ವ್ಯಾಪಾರಿಗಳಿಗೆ ಆರ್ಥಿಕ ನಷ್ಟವಾಗುತ್ತಿದೆ. ನಕಲಿ ನೋಟುಗಳು ಪತ್ತೆಯಾದರೆ ಬ್ಯಾಂಕ್‌ನಲ್ಲಿ ಅವುಗಳ ಮೇಲೆ ‘ನಕಲಿ’ ಎಂದು ಸೀಲ್‌ ಹಾಕಲಾಗುತ್ತದೆ. ಒಂದೇ ಬಾರಿಗೆ ಐದು ನಕಲಿ ನೋಟುಗಳು ಬಂದರೆ ಅವುಗಳನ್ನು ವಶಪಡಿಸಿಕೊಂಡು ಪೊಲೀಸರಿಗೆ ದೂರು ನೀಡಿ ಎಫ್‌ಐಆರ್‌ ದಾಖಲಿಸಲಾಗುವುದು ಎಂದು ರಾಜಾನುಕುಂಟೆ ಎಸ್‌ಬಿಐ ವ್ಯವಸ್ಥಾಪಕ ವಿಶ್ವನಾಥ್‌ ಎಚ್ಚರಿಸಿದ್ದಾರೆ.

Share News

About BigTv News

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *