Breaking News

ಕೆ.ಆರ್. ಪುರಂನಲ್ಲಿ ಟ್ರಾಫಿಕ್ ಪೊಲೀಸ್ ದೌರ್ಜನ್ಯ- ಜಗಳ ಬಿಡಿಸಲು ಹೋದ ವಿದ್ಯಾರ್ಥಿ ಮೇಲೆಯೇ ಹಲ್ಲೆ ನಡೆಸಿದ ಪಿಎಸ್‌ಐ!

ಬೆಂಗಳೂರು: ಸಾರ್ವಜನಿಕರ ನಡುವಿನ ಜಗಳ ಬಿಡಿಸಲು ಮಧ್ಯಪ್ರವೇಶಿಸಿದ ಕಾಲೇಜು ವಿದ್ಯಾರ್ಥಿಯೊಬ್ಬನ ಮೇಲೆ ಕೆ.ಆರ್. ಪುರಂ ಸಂಚಾರಿ ಠಾಣೆಯ ಪಿಎಸ್‌ಐ ನಯನಾ ದೌರ್ಜನ್ಯ ಎಸಗಿದ್ದಾರೆ ಎನ್ನಲಾದ ಘಟನೆ ತೀವ್ರ ಚರ್ಚೆಗೆ ಕಾರಣವಾಗಿದೆ. ಆಗಸ್ಟ್ 12ರಂದು ಬೆಳಿಗ್ಗೆ ಭಟ್ಟರಹಳ್ಳಿ ಸಿಗ್ನಲ್‌ನಿಂದ ಕೆ.ಆರ್. ಪುರಂ ಕಡೆಗೆ ಹೋಗುವ ರಸ್ತೆಯಲ್ಲಿ ಇಬ್ಬರು ಕಾರು ಮಾಲೀಕರ ನಡುವೆ ಜಗಳ ನಡೆದಿತ್ತು. ಇದನ್ನು ಬಿಡಿಸಲು ವಿದ್ಯಾರ್ಥಿ ರಾಹುಲ್ ಮಧ್ಯಪ್ರವೇಶಿಸಿದ್ದ. ಈ ವೇಳೆ ಸ್ಥಳಕ್ಕೆ ಬಂದ ಪಿಎಸ್‌ಐ ನಯನಾ, ವಿಚಾರಣೆ ನಡೆಸದೆ ರಾಹುಲ್‌ನ ಕಾಲರ್ ಹಿಡಿದು ಎಳೆದಾಡಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೆ, ವಿದ್ಯಾರ್ಥಿಯ ಮೊಬೈಲ್ ಕಸಿದು ನೆಲಕ್ಕೆ ಎಸೆದ ಪರಿಣಾಮ ಸ್ಕ್ರೀನ್ ಹಾನಿಯಾಗಿದೆ ಎಂದು ಆರೋಪಿಸಲಾಗಿದೆ. ಘಟನೆಯ ದೃಶ್ಯಗಳನ್ನು ಸ್ಥಳೀಯರು ಚಿತ್ರೀಕರಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಧಿಕಾರ ದುರ್ಬಳಕೆ ಆರೋಪದಡಿ ಪಿಎಸ್‌ಐ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

Share News

About BigTv News

Check Also

68 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿದ ಆರೋಪ, ಕೆಎಎಸ್ ಅಧಿಕಾರಿ ವಿರುದ್ಧ ಎಫ್‌ಐಆರ್!

ಬೆಂಗಳೂರು ಗ್ರಾಮಾಂತರ: ದೇವನಹಳ್ಳಿ ತಾಲೂಕಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ, ಅಕ್ರಮವಾಗಿ ಆರ್‌ಟಿಸಿ ಖಾತೆ ಬದಲಾವಣೆ …

Leave a Reply

Your email address will not be published. Required fields are marked *