ಕುಣಿಗಲ್ ತಾಲೂಕಿನ ಅಮೃತೂರು ಹೋಬಳಿಯ ಬೆನವಾರ ಕೊಪ್ಪಲು ಗ್ರಾಮದಲ್ಲಿ ಜಮೀನು ವಿಚಾರಕ್ಕೆ ತಮ್ಮನೇ ಅಣ್ಣನನ್ನು ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ವರದರಾಜು (65) ಕೊಲೆಯಾದವರು, ರಾಮದಾಸ್ (62) ಆರೋಪಿಯಾಗಿದ್ದು, ಇಬ್ಬರೂ ಒಂದೇ ಮನೆಯಲ್ಲಿ ವಾಸವಿದ್ದರು. ಆಗಸ್ಟ್ 15ರಂದು ಒಂದು ಎಕರೆ ಜಮೀನು ಹಂಚಿಕೆ ವಿಚಾರದಲ್ಲಿ ಇಬ್ಬರ ನಡುವೆ ಗಲಾಟೆ ನಡೆದಿದ್ದು, ಬಳಿಕ ವರದರಾಜು ಅವರನ್ನು ಕೊಲೆ ಮಾಡಲಾಗಿದೆ. ಮೃತದೇಹವನ್ನು ಮಲದ ಗುಂಡಿಗೆ ಹಾಕಿ ಚಪ್ಪಡಿಕಲ್ಲು ಹಾಗೂ ತೆಂಗಿನ ಗರಿಗಳಿಂದ ಮುಚ್ಚಲಾಗಿತ್ತು. ಮನೆ ಸುತ್ತ ಕೆಟ್ಟ ವಾಸನೆ ಬಂದ ಹಿನ್ನೆಲೆಯಲ್ಲಿ ತಂಗಿ ಪದ್ಮಮ್ಮ ಪರಿಶೀಲಿಸಿದಾಗ ಮಲದ ಗುಂಡಿಯಲ್ಲಿ ಕಾಲುಗಳು ಕಾಣಿಸಿಕೊಂಡಿವೆ. ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಭೇಟಿ ನೀಡಿದ ಹುಲಿಯೂರುದುರ್ಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿ ರಾಮದಾಸ್‌ಗಾಗಿ ಶೋಧ ಮುಂದುವರಿದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

