ಮುಧೋಳ ನಗರದ ತಂಬಾಕ್ ಚೌಕ್ ಬಳಿಯ ಚಿನ್ನಾಭರಣದ ಅಂಗಡಿಗೆ ವ್ಯಾಪಾರ ಮಾಡುವ ನೆಪದಲ್ಲಿ ಬಂದ ಮೂವರು ಬುರ್ಖಾಧಾರಿ ಮಹಿಳೆಯರು ಮಾಲೀಕರ ಗಮನ ಬೇರೆಡೆ ಸೆಳೆದು ₹22.87 ಲಕ್ಷ ಮೌಲ್ಯದ 163 ಗ್ರಾಂ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾರೆ. ಕಾಲುಚೈನು ಖರೀದಿಸುವುದಾಗಿ ಹೇಳಿ ವಿವಿಧ ವಿನ್ಯಾಸಗಳನ್ನು ತೋರಿಸುವಂತೆ ಕೇಳಿದ ಮಹಿಳೆಯರು, ಮಾಲೀಕರು ಆಭರಣಗಳನ್ನು ತೋರಿಸುತ್ತಿದ್ದ ವೇಳೆ ಚಿನ್ನಾಭರಣಗಳಿದ್ದ ಟ್ರೇಯನ್ನೇ ಕದ್ದುಕೊಂಡು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಆಗಸ್ಟ್ 8ರಂದು ಘಟನೆ ನಡೆದಿದ್ದು, ಅಂಗಡಿ ಮಾಲೀಕರು ಆಗಸ್ಟ್ 16ರಂದು ಮುಧೋಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿರುವ ಪೊಲೀಸರು ಆರೋಪಿಗಳ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

