Breaking News

ದಾಳಿ ಮಾಡಿದ ಮಂಗನನ್ನು ಬಲೆಗೆ ಕೆಡುವಿದ ಅರಣ್ಯ ಇಲಾಖೆ, ನಾಲ್ಕು ದಿನಗಳ ನಂತರ ಮಂಗನ ಬಂಧನ:

ಧಾರವಾಡದ ಗರಗ ದಲ್ಲಿ ಹಲವರ ಮೇಲೆ ದಾಳಿ ಮಾಡಿದ್ದ ಮಂಗ ಇಂದು ಬಲೆಗೆ ಬಿದ್ದಿದೆ. ಹಲವಡೆ ದಾಳಿ ಮಾಡಿದ ಮಂಗ ಧಾರವಾಡದಲ್ಲಿನ ಶಾಲೆಯಿಂದ ಮನೆಗೆ ಮರಳುತ್ತಿದ್ದ ಬಾಲಕಿ ಸೇರಿದಂತೆ ಹಲವರಿಗೆ ಕಚ್ಚಿ ಗಾಯಗೊಳಿಸಿದ್ದ ಮಂಗನನ್ನು ಬಲೆಗೆ ಕೆಡವಲಾಗಿದೆ. ಪೊಲೀಸ್ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ನೇತ್ರತ್ವದಲ್ಲಿ ಮಂಗನನ್ನು ಯಶಸ್ವಿ ಕಾರ್ಯಾಚರಣೆಯಿಂದ ಹಿಡಿಯಲಾಗಿದೆ ಇದರಿಂದ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಗ್ರಾಮದ ಇಕ್ರಾ ಗಡದಾಳೆ ಎಂಬ ಬಾಲಕಿಗೆ ಮಂಗ ಕಚ್ಚಿತ್ತು.
ಗಾಯಗೊಂಡ ಅನೇಕರು ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಮಂಗ ಇನ್ನೂ ಕೆಲವರ ಮೇಲೆ ದಾಳಿ ನಡೆಸಿದ್ದರಿಂದ ಗ್ರಾಮಸ್ಥರು ಕಂಗಾಲಾಗಿ ಅರಣ್ಯ ಹಾಗೂ ಪೊಲೀಸರ ಮೊರೆ ಹೋಗಿದ್ದರು. ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಸಿಇಐ ಎಸ್.ಬಿ. ಪಾಟೀಲ, ಗರಗ ಪೊಲೀಸ್ ಠಾಣೆ. ಪಿಎಸ್ ಐ ಎಫ್.ಎಂ. ಮಂಟೂರ ನೇತೃತ್ವದಲ್ಲಿ ಪೊಲೀಸ್ ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿ ಮಂಗನ ಸೆರೆ ಹಿಡಿಯುವ ಕಾರ್ಯ ಮಾಡಿದ್ದಾರೆ.

Share News

About BigTv News

Check Also

ಹುಬ್ಬಳ್ಳಿಯಲ್ಲಿ ರಂಗ ಪಂಚಮಿ ಸಂಭ್ರಮಕ್ಕೆ ಸಜ್ಜು: ಸಂಗೀತ, ಡಿಜೆ ಡ್ಯಾನ್ಸ್ ಕಾರ್ಯಕ್ರಮ…

ರಂಗ ಪಂಚಮಿ ಅಂಗವಾಗಿ ಸ್ನೇಹಿತರಿಗಾಗಿ ವಿಶೇಷ ಡ್ಯಾನ್ಸ್ ಕಾರ್ಯಕ್ರಮ ಹುಬ್ಬಳ್ಳಿ: ರಂಗ ಪಂಚಮಿ ಹಬ್ಬದ ಅಂಗವಾಗಿ ಮಾರ್ಚ್ 6 ರಂದು …

Leave a Reply

Your email address will not be published. Required fields are marked *