Breaking News

ಮನೆ ರಿಪೇರಿಗೆ ಸಾಲ ಮಾಡಿದ್ದ ಕುಟುಂಬಕ್ಕೆ ಕಳ್ಳರ ಶಾಕ್; ಹಂಚು ಮುರಿದು ₹50 ಸಾವಿರ, ಚಿನ್ನ ಎಗರಿಸಿದ ಖದೀಮರು!

ನರಗುಂದ ಪಟ್ಟಣದ ಹಾಲಕೇರಿ ಬಡಾವಣೆಯಲ್ಲಿ ಮನೆಗೆ ಬೀಗ ಹಾಕಿಕೊಂಡು ಸಂಬಂಧಿಕರ ಊರಿಗೆ ತೆರಳಿದ್ದ ಕುಟುಂಬದ ಮನೆಯಲ್ಲಿ ಮೇಲ್ಛಾವಣಿಯ ಹಂಚು ಮುರಿದು ಕಳ್ಳರು ಒಳನುಗ್ಗಿ ₹50 ಸಾವಿರ ನಗದು ಹಾಗೂ 10 ಗ್ರಾಂ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾರೆ. ಸುರೇಖಾ ಬಂಡಿವಡ್ಡರ್ ಕುಟುಂಬ ಎರಡು ದಿನಗಳ ಕಾಲ ಊರಿಗೆ ತೆರಳಿತ್ತು. ಇದೇ ವೇಳೆ ಕಳ್ಳರು ಮನೆಗೆ ನುಗ್ಗಿದ್ದು, ಕುಟುಂಬಸ್ಥರು ವಾಪಸ್ ಬಂದಾಗ ಕಳ್ಳತನ ಬೆಳಕಿಗೆ ಬಂದಿದೆ. ಮನೆ ದುರಸ್ತಿಗಾಗಿ ಸ್ವಸಹಾಯ ಸಂಘದಿಂದ ಸಾಲ ಮಾಡಿಕೊಂಡಿದ್ದ ಕುಟುಂಬಕ್ಕೆ ಕಳ್ಳತನದಿಂದ ಮತ್ತಷ್ಟು ಆರ್ಥಿಕ ಸಂಕಷ್ಟ ಎದುರಾಗಿದೆ. ನರಗುಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ತನಿಖೆ ನಡೆಸುತ್ತಿದ್ದಾರೆ.

Share News

About BigTv News

Check Also

68 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿದ ಆರೋಪ, ಕೆಎಎಸ್ ಅಧಿಕಾರಿ ವಿರುದ್ಧ ಎಫ್‌ಐಆರ್!

ಬೆಂಗಳೂರು ಗ್ರಾಮಾಂತರ: ದೇವನಹಳ್ಳಿ ತಾಲೂಕಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ, ಅಕ್ರಮವಾಗಿ ಆರ್‌ಟಿಸಿ ಖಾತೆ ಬದಲಾವಣೆ …

Leave a Reply

Your email address will not be published. Required fields are marked *