Breaking News

ಹನೂರು ಶೂಟೌಟ್ ಪ್ರಕರಣ ಬೆನ್ನಲ್ಲೇ; ಬಂಡೀಪುರದ ಹೋ ಸ್ಟೇನಲ್ಲಿ 46 ಜಿಂಕೆ ಕೊಂಬು, ನವಿಲುಗರಿ, ಕೋವಿಗಳು ಪತ್ತೆ

ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನದ ಖಾಸಗಿ ಹೋಂ ಸ್ಟೇನಲ್ಲಿ ವನ್ಯಜೀವಿಗಳ ಚರ್ಮ, ಜಿಂಕೆ ಕೊಂಬುಗಳು, ನವಿಲುಗರಿ ಹಾಗೂ ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ. ರೈತ ಸಂಘದ ಕಾರ್ಯಕರ್ತರು ಕೆಬ್ಬೇಪುರ ಗ್ರಾಮದ ಜಮೀನಿನಲ್ಲಿರುವ ಹೋಂ ಸ್ಟೇನಲ್ಲಿ ಈ ವಸ್ತುಗಳನ್ನು ಪತ್ತೆಹಚ್ಚಿದ್ದಾರೆ. ಹೋಂ ಸ್ಟೇನಲ್ಲಿ 48 ಜಿಂಕೆ ಕೊಂಬು, ಪ್ರಾಣಿ ಚರ್ಮ, ನವಿಲುಗರಿ, ನಾಲ್ಕು ಗನ್‌, ಒಂದು ರಿವಾಲ್ವರ್‌ ಹಾಗೂ ಏರ್‌ಸ್ಪೇಸ್‌ ಪಿಸ್ತೂಲ್‌ ಸೇರಿದಂತೆ ಹಲವು ವಸ್ತುಗಳು ಪತ್ತೆಯಾಗಿವೆ. ಮಾಹಿತಿ ಪಡೆದ ಬಂಡೀಪುರ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಂತಹ ಘಟನೆಗಳು ನಡೆಯುತ್ತಿವೆ ಎಂದು ಆರೋಪಿಸಿರುವ ರೈತ ಸಂಘದ ಮುಖಂಡ ಶಶಿ, ಪತ್ತೆಯಾದ ವಸ್ತುಗಳ ಕುರಿತು ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

Share News

About BigTv News

Check Also

ಮದುವೆಯಾಗಿ ಮಕ್ಕಳಿದ್ರೂ ಅಕ್ರಮ ಸಂಬಂಧ: ರೈಲಿಗೆ ತಲೆಕೊಟ್ಟು ವಿವಾಹಿತೆಯೊಂದಿಗೆ ಯುವಕ ಆತ್ಮಹತ್ಯೆ

ಮಂಡ್ಯದ ವಿಸಿ ಫಾರಂ ರಸ್ತೆಯ ರೈಲ್ವೆ ಹಳಿಯಲ್ಲಿ ರೈಲಿಗೆ ತಲೆಕೊಟ್ಟು ವಿವಾಹಿತೆ ಸಹನಾ (25) ಮತ್ತು ರಾಹುಲ್ (23) ಆತ್ಮಹತ್ಯೆಗೆ …

Leave a Reply

Your email address will not be published. Required fields are marked *