Breaking News

ಪುಣೆ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಳಿ ಅಪಘಾತ ಧಾರವಾಡದ ಒಂದೇ ಕುಟುಂಬದ 6 ಜನ ಮೃತ

ಧಾರವಾಡ : ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿನ ಕಾಶೀಳ ಬಳಿ ಪುಣೆ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಬಳಿ ರಸ್ತೆ ಅಪಘಾತದಲ್ಲಿ ಧಾರವಾಡದ ಒಂದೇ ಕುಟುಂಬದ 6 ಜನರು ಮೃತಪಟ್ಟಿದ್ದು, ಇಬ್ವರಿಗೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬುಧವಾರ ನಸುಕಿನಲ್ಲಿ ನಡೆದಿದೆ.ಅಪಘಾತದಲ್ಲಿ ಇಬ್ಬರು ಪುರುಷರು, ಇಬ್ಬರು ಮಹಿಳೆಯರು ಹಾಗೂ ಎರಡೂವರೆ ವರ್ಷದ ಒಬ್ಬ ಬಾಲಕ ಮತ್ತು 5 ವರ್ಷದ ಬಾಲಕಿ ಮೃತಪಟ್ಟಿದ್ದು, ಇವರು ಧಾರವಾಡದ ನಿಜಾಮೋದಿನ ಸೌದಾಗರ ಎಂಬ ಕುಟುಂಬದವರು ಎನ್ನಲಾಗಿದೆ.ಚಾಲಕನ‌ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿಯಾದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.ಸದ್ಯ ಕಾರು ಚಾಲಕ ಮತ್ತು ಒಂದು ಹೆಣ್ಣ ಮಗುವಿಗೆ ಗಂಭೀರ ಗಾಯಗೊಂಡಿದ್ದು,, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ‌ ನೀಡಲಾಗುತ್ತಿದೆ.ಘಟನಾ ಸ್ಥಳಕ್ಕೆ ಬೋರೆಗಾಂವ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.ಹಾಗೂ ಈ ಸಂಬಂದ ಕಾಶೀಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About admin

Check Also

ನಗರ ಪೊಲೀಸ್ ವಿರುದ್ಧ ಅರ್ಭಟಿಸಿದ ರೌಡಿಶೀಟರ್ ಗಳ ವಿರುದ್ಧ ಕ್ರಮ ಒತ್ತಾಯ!!

ಮನೆಮುರಕರ ಕೂಟದಿಂದ ಸಿಪಿಐ ಹಾಗು ಪೊಲೀಸ್ ಇಲಾಖೆಗೆ ಕಳಂಕ ತರಲು ನಡಿತಾ ಸಂಚು? ಕೋರ್ಟ್ ನಲ್ಲಿ ಕೇಸ್ ಇದ್ದರು ಮಾಧ್ಯಮಗಳ …

Leave a Reply

Your email address will not be published. Required fields are marked *