Breaking News

ಮಾದಕ ವಸ್ತು ಸೇವನೆ: ನಾಲ್ಕು ಮಂದಿ ಬಂಧನ

ಮಂಗಳೂರು: ವಿವಿಧ ಠಾಣೆ ವ್ಯಾಪ್ತಿಯಲ್ಲಿ ಮಾದಕ ವಸ್ತು ಸೇವನೆ ಪ್ರಕರಣದಲ್ಲಿ ನಾಲ್ಕು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಸಬಾ ಬೆಂಗ್ರೆಯಲ್ಲಿ ಆ.20ರಂದು ರಾತ್ರಿ ಮಾದಕ ವಸ್ತು ನಶೆಯಲ್ಲಿದ್ದ ಇಬ್ಬರನ್ನು ಪಣಂಬೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ವಳಚ್ಚಿಲ್ ನಿವಾಸಿ ಮೌಶುಕ್ ಸುಹಾನ್ (23) ಮತ್ತು ಬಂದರ್ ನೆಲ್ಲಿಕಾಯಿ ರಸ್ತೆ ನಿವಾಸಿ ಮೊಹಮ್ಮದ್ ಅಬ್ಜಲ್ (29) ಬಂಧಿತ ಆರೋಪಿಗಳು. ಇನ್ನೊಂದು ಪ್ರಕರಣದಲ್ಲಿ ಕಸಬಾ ಬೆಂಗ್ರೆಯ ಸೂಪರ್ ಸ್ಟಾರ್ ಮೈದಾನದ ಬಳಿ ಅಡ್ಯಾರ್ ನಿವಾಸಿ ರಿಯಾಜ್ ಅಹಮ್ಮದ್ (43) ಎಂಬಾತನನ್ನು ಬಂಧಿಸಲಾಗಿದೆ. ಮುನ್ನೂರು ಗ್ರಾಮದ ಕುತ್ತಾರು ಜಂಕ್ಷನ್ ನಲ್ಲಿ ಆ.21ರಂದು ರಾತ್ರಿ ಮಾದಕ ವಸ್ತು ಸೇವಿಸಿ ಸಾರ್ವಜನಿಕರಿಗೆ ತೊಂದರೆಯಾಗುವಂತೆ ವರ್ತಿಸುತ್ತಿದ್ದ ಹುಸೈನ್ ಸಿಹಾಬ್ ಎಂಬಾತನನ್ನು ಉಳ್ಳಾಲ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

Share News

About BigTv News

Check Also

ದೇರಳಕಟ್ಟೆ: ಮೆಡಿಕಲ್‌ ಕಾಲೇಜಿನಲ್ಲಿ Ragging ಪ್ರಕರಣ ದಾಖಲು

ಮಂಗಳೂರು: ದೇರಳಕಟ್ಟೆಯ ಮೆಡಿಕಲ್ ಕಾಲೇಜೊಂದರಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ರಾಗಿಂಗ್ ನಡೆಸಿ ಜೀವ ಬೆದರಿಕೆ ಹಾಕಿರುವ ಆರೋಪದಡಿ ಉಳ್ಳಾಲ …

Leave a Reply

Your email address will not be published. Required fields are marked *