Breaking News

ರಾಯಚೂರಲ್ಲಿ ಘೋರ ಕೃತ್ಯ : ಕೋರ್ಟ್ ಅವರಣದಲ್ಲೇ ಅಳಿಯನಿಗೆ ಚಾಕು ಇರಿದ ಮಾವ!

ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಕೋರ್ಟ್ ಆವರಣದಲ್ಲೇ ಮಾವ ಅಳಿಯನಿಗೆ ಚಾಕು ಇರಿದ ಘಟನೆ ನಡೆದಿದೆ. ಶಂಭುಲಿಂಗ (52) ಎಂಬಾತನಿಗೆ ಮಾವ ದಾನಪ್ಪ ಚಾಕುವಿನಿಂದ ಇರಿದಿದ್ದಾನೆ. ಪತ್ನಿ ವಿಜಯಲಕ್ಷ್ಮಿ ಕೋರ್ಟ್‌ನಲ್ಲಿ ಡಿ ಗ್ರೂಪ್ ಸಿಬ್ಬಂದಿಯಾಗಿದ್ದು, ಕೆಲಸದ ನಿಮಿತ್ತ ಶಂಭುಲಿಂಗ ಕೋರ್ಟ್‌ಗೆ ಬಂದಿದ್ದ. ಈ ವೇಳೆ ದಾನಪ್ಪ ಕಿರಿಕ್ ಮಾಡಿದ್ದು, ಪತ್ನಿ ಜಗಳ ಬಿಡಿಸಲು ಮುಂದಾದಾಗ ಶಂಭುಲಿಂಗನಿಗೆ ಚಾಕುವಿನಿಂದ ಇರಿದಿದ್ದಾನೆ. ಎದೆ ಹಾಗೂ ಬೆನ್ನು ಸೇರಿದಂತೆ ಮೂರ್ನಾಲ್ಕು ಕಡೆ ಗಾಯಗಳಾಗಿದ್ದು, ಶಂಭುಲಿಂಗನಿಗೆ ಸಿಂಧನೂರು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ಸಿಂಧನೂರು ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

ದೇರಳಕಟ್ಟೆ: ಮೆಡಿಕಲ್‌ ಕಾಲೇಜಿನಲ್ಲಿ Ragging ಪ್ರಕರಣ ದಾಖಲು

ಮಂಗಳೂರು: ದೇರಳಕಟ್ಟೆಯ ಮೆಡಿಕಲ್ ಕಾಲೇಜೊಂದರಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ರಾಗಿಂಗ್ ನಡೆಸಿ ಜೀವ ಬೆದರಿಕೆ ಹಾಕಿರುವ ಆರೋಪದಡಿ ಉಳ್ಳಾಲ …

Leave a Reply

Your email address will not be published. Required fields are marked *