ದುಬೈನಿಂದ ಬೆಂಗಳೂರಿಗೆ ಬಂದ ಪ್ರಯಾಣಿಕನೊಬ್ಬ ಬಾಯಿಯೊಳಗೆ ಅಡಗಿಸಿಕೊಂಡು ತಂದಿದ್ದ ಸುಮಾರು 82 ಗ್ರಾಂ ತೂಕದ ಎರಡು ಚಿನ್ನದ ಕ್ಯಾಪ್ಸೂಲ್‌ಗಳನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ CISF ಸಿಬ್ಬಂದಿ ಪತ್ತೆಹಚ್ಚಿದ್ದಾರೆ. ಮೊಹಮ್ಮದ್ ಸಿರಾಜ್ ಎಂಬ ಪ್ರಯಾಣಿಕನನ್ನು ವಶಕ್ಕೆ ಪಡೆಯಲಾಗಿದೆ. IndiGo 6E-1486 ವಿಮಾನದಲ್ಲಿ ಬಂದಿದ್ದ ಸಿರಾಜ್, ಟರ್ಮಿನಲ್-1ರಲ್ಲಿ ತಪಾಸಣೆ ವೇಳೆ ಅನುಮಾನಾಸ್ಪದವಾಗಿ ವರ್ತಿಸಿದ್ದಾನೆ ಎನ್ನಲಾಗಿದೆ. ಹೆಚ್ಚಿನ ಪರಿಶೀಲನೆ ನಡೆಸಿದಾಗ ಬಾಯಿಯೊಳಗೆ ಎರಡು ಚಿನ್ನದ ಕ್ಯಾಪ್ಸೂಲ್‌ಗಳನ್ನು ಅಡಗಿಸಿಟ್ಟಿರುವುದು ಪತ್ತೆಯಾಗಿದೆ. ಬಾಡಿ ಸ್ಕ್ಯಾನರ್‌ನಿಂದ ತಪ್ಪಿಸಿಕೊಳ್ಳಲು ಚಿನ್ನವನ್ನು ಕ್ಯಾಪ್ಸೂಲ್ ರೂಪದಲ್ಲಿ ಅಡಗಿಸಿಕೊಂಡು ಬಂದಿರುವ ಶಂಕೆ ವ್ಯಕ್ತವಾಗಿದೆ. CISF ಸಿಬ್ಬಂದಿ ಸಿರಾಜ್‌ನನ್ನು KIA ಪೊಲೀಸರಿಗೆ ಹಸ್ತಾಂತರಿಸಿದ್ದು, ಚಿನ್ನದ ಮೂಲ, ಮೌಲ್ಯ ಹಾಗೂ ಕಳ್ಳಸಾಗಣೆ ಕುರಿತು ತನಿಖೆ ಮುಂದುವರಿದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

