Breaking News

ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ₹8.89 ಕೋಟಿ ಸೈಟ್ ಅಕ್ರಮ, ಹಲವರ ಬಂಧನ!

ಕೊಪ್ಪಳ ನಗರಭಿವೃದ್ಧಿ ಪ್ರಾಧಿಕಾರ(KUDA)ದಲ್ಲಿ ನಡೆದ ₹8.89 ಕೋಟಿ ಸೈಟ್ ಅಕ್ರಮ ಮತ್ತು ಹಣ ವಂಚನೆ ಪ್ರಕರಣದಲ್ಲಿ ಹೊರಗುತ್ತಿಗೆ ನೌಕರ ರವೀಂದ್ರಕುಮಾರ್, ಪತ್ನಿ ರಮಾ ಹಾಗೂ ಸಹೋದರ ಅನಿಲ್ ಕುಮಾರ್ ಬಂಧನವಾಗಿದ್ದಾರೆ. ಸೈಟ್ ನೀಡುವುದಾಗಿ ಹೇಳಿ 40ಕ್ಕೂ ಹೆಚ್ಚು ಖಾತೆಗಳಿಗೆ ಹಣ ವರ್ಗಾಯಿಸಿಕೊಂಡ ಆರೋಪ ಇವರ ಮೇಲಿದೆ. ಅನಿಲ್ ಖಾತೆಗೆ ₹1.5 ಕೋಟಿಗೂ ಅಧಿಕ ಹಾಗೂ ರಮಾ ಖಾತೆಯಿಂದ ₹30 ಲಕ್ಷಕ್ಕೂ ಅಧಿಕ ಹಣ ವರ್ಗಾವಣೆಯಾಗಿರುವುದು ಪತ್ತೆಯಾಗಿದೆ. ಪ್ರಕರಣದ ಆರೋಪಿ ಮಾಜಿ ಆಯುಕ್ತ ಯೋಗಾನಂದ್‌ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಅಕ್ರಮದ ಬಳಿಕ ದೇವಸ್ಥಾನಗಳಿಗೆ ತೆರಳಿದ್ದ ರವೀಂದ್ರ ಮತ್ತು ಪತ್ನಿಯನ್ನು ಚಿತ್ರದುರ್ಗದ ಬಳಿ ಪೊಲೀಸರು ಬಂಧಿಸಿದ್ದಾರೆ.

Share News

About BigTv News

Check Also

ಬೆಂಗಳೂರಲ್ಲಿ ನಕಲಿ ಡೇಟಿಂಗ್ ಬಲೆ, 20 ಲಕ್ಷ ರೂ. ಮೌಲ್ಯದ ಚಿನ್ನ ಲೂಟಿ

ಬೆಂಗಳೂರು: ಚಂದ್ರಾ ಲೇಔಟ್‌ನಲ್ಲಿ ಡೇಟಿಂಗ್ ಆಯಪ್ ಮೂಲಕ ಪರಿಚಯವಾದ ವ್ಯಕ್ತಿಯನ್ನು ಮನೆಗೆ ಕರೆಸಿಕೊಂಡ ಯುವಕನಿಗೆ ಚಾಕು ತೋರಿಸಿ ಬೆದರಿಸಿ, 226 …

Leave a Reply

Your email address will not be published. Required fields are marked *