Breaking News

ಡ್ರ್ಯಾಗನ್ ಫ್ರೂಟ್ ಬೆಳೆದು ಯಶಸ್ವಿಯಾದ ಕರಾವಳಿ ಉದ್ಯಮಿ…

ಬಂಟ್ವಾಳ (ದಕ್ಷಿಣ ಕನ್ನಡ):ಇತ್ತೀಚಿನ ಕೆಲ ದಿನಗಳಿಂದ ಟೊಮೆಟೊ ಸೇರಿದಂತೆ ತರಕಾರಿಗಳ ಬೆಲೆ ಗಗನಕಗ್ಕೇರಿರುವುದು ನಿತ್ಯ ಸುದ್ದಿಯಾಗ್ತಿದೆ. ಈ ನಡುವೆದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದ ನೋರ್ನಡ್ಕಪಡು ಎಂಬಲ್ಲಿ ಉದ್ಯಮಿಯೊಬ್ಬರು ತಮ್ಮ 14 ಎಕರೆ ಜಮೀನಿನಲ್ಲಿ ಎರಡು ಎಕರೆಯಷ್ಟು ಪ್ರದೇಶದಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆದಿದ್ದಾರೆ. ಈ ಬೆಳೆಯಲ್ಲಿ ಉತ್ತಮ ಲಾಭ ಪಡೆದು ತೋರಿಸಿದ್ದಾರೆ ಬಂಟ್ವಾಳದ ಹೋಟೆಲ್ ಉದ್ಯಮಿ ಚಂದ್ರಹಾಸ ಶೆಟ್ಟಿ.

ಡ್ರ್ಯಾಗನ್ ಫ್ರೂಟ್ ಬೆಳೆದು ಯಶಸ್ವಿ ಕಂಡಿರುವ ಚಂದ್ರಹಾಸ ಶೆಟ್ಟಿ ತಮ್ಮ ಅನುಭವನ್ನು ಹೀಗೆ ಹಂಚಿಕೊಳ್ಳುತ್ತಾರೆ. ”ಡ್ರ್ಯಾಗನ್ ಫ್ರೂಟ್ ಬೆಳೆಗೆ ಪ್ರಾಣಿಗಳ ಕಾಟವಿಲ್ಲ, ನವಿಲು ಇಲ್ಲೆಲ್ಲಾ ಓಡಾಡುತ್ತಿದ್ದರೂ ಹಣ್ಣಿನ ಹತ್ತಿರ ಬರುವುದಿಲ್ಲ. ಈ ಬೆಳೆಗೆ ರೋಗಗಳ ಭಯವಿಲ್ಲ. ಬೆಳೆಗೆ ಕೇವಲ ಹಟ್ಟಿ ಗೊಬ್ಬರವನ್ನಷ್ಟೇ ಹಾಕಲಾಗಿದೆ. ಯಾವುದೇ ರಾಸಾಯನಿಕ ಹಾಕದೇ ಬೆಳೆಸಿದ್ದರಿಂದ ಉತ್ತಮ ಫಸಲೂ ಕೂಡಾ ಬಂದಿದೆ” ಎಂದು ತಿಳಿಸಿದರು.

Share News

About BigTv News

Check Also

ಎನಿ ಕಂಡೀಶನ್… ಹುಬ್ಬಳ್ಳಿಗೆ ನಾಳೆ ನೂತನ ಕಮಿಷನರ್ ಎಂಟ್ರಿ! ಬೆಳಗ್ಗೆಯೇ ಅಧಿಕಾರ ಸ್ವೀಕಾರ…!

ಭೂಷಣ್ ಬೋರ್ಸೆ ಹೆಗಲಿಗೆ ಅವಳಿ ನಗರದ ಖಾಕಿ ಹೊಣೆ! ನಾಳೆಯಿಂದ ಹುಬ್ಬಳ್ಳಿ–ಧಾರವಾಡಕ್ಕೆ ಹೊಸ ಕಮಿಷನರ್! ಹುಬ್ಬಳ್ಳಿಗೆ ನಾಳೆ ನೂತನ ಕಮಿಷನರ್ …

Leave a Reply

Your email address will not be published. Required fields are marked *