Breaking News

ಬೆಂಗಳೂರು ಉದ್ಯಮಿ ರವಿಪ್ರಕಾಶ್‌ ನಾಪತ್ತೆ ಕೇಸ್‌ಗೆ ಬಿಗ್‌ ಟ್ವಿಸ್ಟ್‌.. ಮೈದುಕೂರು MLA ಸೇರಿ ಮೂವರ ವಿರುದ್ಧ FIR

ಬೆಂಗಳೂರು: ಆರ್.ಆರ್.ನಗರದ 14 ಎಕರೆ ಜಮೀನು ವಿಚಾರವಾಗಿ ಮೈದುಕೂರು ಶಾಸಕ ಪುಟ್ಟ ಸುಧಾಕರ್ ಯಾದವ್ ಹಾಗೂ ಉದ್ಯಮಿ ರವಿಪ್ರಕಾಶ್ ನಡುವೆ ನಡೆಯುತ್ತಿದ್ದ ವಿವಾದ ಇದೀಗ ಕಿಡ್ನಾಪ್ ಪ್ರಕರಣದವರೆಗೆ ತಲುಪಿದೆ. ಆಂಧ್ರಪ್ರದೇಶದ ಮೈದುಕೂರು ಪೊಲೀಸರು ರವಿಪ್ರಕಾಶ್ ಅವರನ್ನು ಬೆಂಗಳೂರಿನಿಂದ ಕರೆದೊಯ್ದಿದ್ದು, ಕುಟುಂಬಸ್ಥರು ಅಪಹರಣದ ಆರೋಪ ಮಾಡಿದ್ದಾರೆ. ಆಗಸ್ಟ್ 30ರಂದು ಆರ್.ಆರ್.ನಗರದ ನಿವಾಸದ ಬಳಿ ರವಿಪ್ರಕಾಶ್ ಅವರನ್ನು ಕಾರಿನಿಂದ ಎಳೆದುಕೊಂಡು ಹೋಗಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಮೈದುಕೂರು ಠಾಣೆಯಲ್ಲಿ ದಾಖಲಾಗಿರುವ ಕೊಲೆ ಯತ್ನ ಪ್ರಕರಣದಲ್ಲಿ ರವಿಪ್ರಕಾಶ್ 5ನೇ ಆರೋಪಿಯಾಗಿದ್ದು, ಅದೇ ಪ್ರಕರಣದಲ್ಲಿ ಬಂಧಿಸಲಾಗಿದೆ ಎಂದು ಆಂಧ್ರ ಪೊಲೀಸರು ತಿಳಿಸಿದ್ದಾರೆ. ಇತ್ತ ಶಾಸಕ ಪುಟ್ಟ ಸುಧಾಕರ್ ಯಾದವ್ ಆರೋಪಗಳನ್ನು ತಳ್ಳಿ ಹಾಕಿದ್ದು, ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಲಾಗುತ್ತಿದೆ ಎಂದಿದ್ದಾರೆ. ಆಂಧ್ರ ಪೊಲೀಸರು ಬೆಂಗಳೂರಿನ ಪೊಲೀಸರಿಗೆ ಮಾಹಿತಿ ನೀಡಿ ರವಿಪ್ರಕಾಶ್ ಅವರನ್ನು ಕರೆದೊಯ್ದಿದ್ದಾಗಿ ಹೇಳಿದರೆ, ಸಂಜೆ ವೇಳೆಗೆ ಮಾಹಿತಿ ನೀಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಇದೀಗ ಪ್ರಕರಣ ಯಾವ ತಿರುವು ಪಡೆಯಲಿದೆ ಎಂಬುದು ಕುತೂಹಲ ಮೂಡಿಸಿದೆ.

Share News

About BigTv News

Check Also

ಸಿಲಿಂಡರ್ ಸ್ಫೋಟಗೊಂಡು 20ಕ್ಕೂ ಹೆಚ್ಚು ಕಾರ್ಮಿಕರ ಶೆಡ್‌ಗಳು ಭಸ್ಮ!

ಕಲಬುರಗಿ ಜಿಲ್ಲೆಯ ಹೊನ್ನಕಿರಣಗಿ ಗ್ರಾಮದ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದಲ್ಲಿರುವ ಗುಲ್ಬರ್ಗಾ ಸಿಮೆಂಟ್ ಕಾರ್ಖಾನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಭಾರೀ ಅಗ್ನಿ …

Leave a Reply

Your email address will not be published. Required fields are marked *