Breaking News

ವ್ಯಾಪಾರಿಯನ್ನು ರಸ್ತೆಯಲ್ಲಿ ತಡೆದು ನಿಲ್ಲಿಸಿ ಹಲ್ಲೆ ಮಾಡಿ ಕಾರು ಸಹಿತ ತಂಡ ಪರಾರಿ

ಕಾಸರಗೋಡು: ಬಂದ್ಯೋಡ್‌ನಲ್ಲಿ ವ್ಯಾಪಾರಿಯನ್ನು ತಡೆದು ನಿಲ್ಲಿಸಿ ಹಲ್ಲೆ ನಡೆಸಿ, ಬಳಿಕ ಅವರ ಕಾರು ಹಾಗೂ ಐಫೋನ್ ಕಸಿದುಕೊಂಡು ತಂಡವೊಂದು ಪರಾರಿಯಾದ ಘಟನೆ ನಡೆದಿದೆ. ಹಲ್ಲೆಗೊಳಗಾದ ಮಳ್ಳಂಗೈಯ ಆಲಿ ಮುಕ್ತಾದ್‌ (34) ಅವರನ್ನು ಗಂಭೀರ ಗಾಯಗಳ ಹಿನ್ನೆಲೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆ.31ರಂದು ಸಂಜೆ ಅಡ್ಕ ಗುರ್ಮೆ ಸಾರ್ವಜನಿಕ ಶ್ಮಶಾನದ ಸಮೀಪ ಘಟನೆ ನಡೆದಿದೆ. ಬಂದ್ಯೋಡ್‌ನಿಂದ ಕಾರಿನಲ್ಲಿ ಮನೆಗೆ ತೆರಳುತ್ತಿದ್ದ ಆಲಿ ಅವರನ್ನು ಮೂವರ ತಂಡ ಕಾರು ಅಡ್ಡಗಟ್ಟಿ ₹50 ಸಾವಿರ ನೀಡುವಂತೆ ಒತ್ತಾಯಿಸಿತ್ತು ಎನ್ನಲಾಗಿದೆ. ಹಣ ನೀಡಲು ನಿರಾಕರಿಸಿದಾಗ ಕಾರಿನಿಂದ ಎಳೆದು ಹೊರಗೆ ಹಾಕಿ ಹಲ್ಲೆ ನಡೆಸಿ, ಬಳಿಕ ಕಾರು ಹಾಗೂ ಐಫೋನ್ ಕಸಿದುಕೊಂಡು ಪರಾರಿಯಾಗಿದ್ದಾರೆ ಎಂದು ಅವರು ಕುಂಬಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಹಲವು ಪ್ರಕರಣಗಳಲ್ಲಿ ಆರೋಪಿಯಾಗಿರುವ ಶಂಸೀರ್‌, ಅಯಾಸ್‌ ಹಾಗೂ ಗುರುತಿಸಬಹುದಾದ ಮತ್ತೋರ್ವ ವ್ಯಕ್ತಿ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಕುಂಬಳೆ ಪೊಲೀಸರು ಆರೋಪಿಗಳ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ.

Share News

About BigTv News

Check Also

ಜಮೀನು ವಿವಾದ: ಯುವಕನ ಕೊಲೆ, ನಾಲೆಗೆ ಶವ ಎಸೆದ ಆರೋಪ

ಮಂಡ್ಯ: ಜಮೀನು ವಿವಾದ ಹಾಗೂ ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ 30 ವರ್ಷದ ನವೀನ್ ಎಂಬ ಯುವಕನನ್ನು ಕೊಲೆ ಮಾಡಿ ಶವವನ್ನು …

Leave a Reply

Your email address will not be published. Required fields are marked *