ಬಿಬಿಎಂಪಿ ಕಾಮಗಾರಿ ಯಡವಟ್ಟು, ಮೆಟ್ರೋ ಪಿಲ್ಲರ್‌ಗೆ ಆಪತ್ತು..!

ಬೆಂಗಳೂರು :– ಬಿಬಿಎಂಪಿ ಕಾಮಗಾರಿ ನಡೆಸುವ ಸಂದರ್ಭದಲ್ಲಿ ರಾಜಕಾಲುವೆ ಕುಸಿದು ಮೆಟ್ರೋ ಪಿಲ್ಲರ್ ಬೇಸ್ಮೆಂಟ್‍ಗೆ ಹಾನಿಯಾಗಿರುವ ಘಟನೆ ಹಲಸೂರು ಮೆಟ್ರೋ ನಿಲ್ದಾಣದ ಪಕ್ಕದಲ್ಲಿ ನಡೆದು ಆತಂಕ ಸೃಷ್ಟಿಸಿದೆ.

ಹಲಸೂರು ಮೆಟ್ರೋ ನಿಲ್ದಾಣದ ಪಕ್ಕದಲ್ಲಿರುವ ರಾಜಕಾಲುವೆ ಹೂಳೆತ್ತುವ ಕಾಮಗಾರಿ ವೇಳೆ ರಾಜಕಾಲುವೆ ರೀಟೇನಿಂಗ್ ವಾಲ್ ಕುಸಿದು ಮೆಟ್ರೋ ಪಿಲ್ಲರ್‍ನ ಬೇಸ್ಮೆಂಟ್‍ಗೆ ಹಾನಿಯಾಗಿದೆ. ನೆಲದಾಳದಲ್ಲಿದ್ದ ಮೆಟ್ರೋ ಪಿಲ್ಲರ್ ಕಾಲಂಗಳು ಹೊರಗೆ ಕಾಣುತ್ತಿದ್ದು, ಇದರಿಂದ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ. ರಾಜಕಾಲುವೆಯಲ್ಲಿ ನೀರು ಹರಿಯುತ್ತಿರುವ ಕಾರಣದಿಂದ ಮೆಟ್ರೋಗೆ ಅಪಾಯ ಬರಬಹುದೆಂದು ಸ್ಥಳೀಯರು ಮೆಟ್ರೋ ನಿಗಮದ ಅಧಿಕಾರಿಗಳ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಮೆಟ್ರೋ ವ್ಯವಸ್ಥಾಪಕ ನಿರ್ದೇಶಕರಾದ ಅಜುಂ ಫರ್ವೇಸ್ ಅವರು ಸ್ಥಳಕ್ಕೆ ಭೇಟಿ ನೀಡಿ ತಕ್ಷಣವೇ ತಡೆಗೋಡೆ ನಿರ್ಮಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಅಲ್ಲದೆ, ಹಲಸೂರು ಮೆಟ್ರೋ ನಿಲ್ದಾಣದಿಂದ ಇಂದಿರಾನಗರ ಮೆಟ್ರೋ ನಿಲ್ದಾಣದವರೆಗೆ ಮೆಟ್ರೋ ರೈಲು ವೇಗವನ್ನು 35 ಕಿ.ಮೀ.ನಿಂದ 25 ಕಿ.ಮೀ.ಗೆ ಇಳಿಸುವಂತೆ ಸೂಚನೆ ನೀಡಿದ್ದಾರೆ.

ಸದ್ಯ ಮೆಟ್ರೋ ಪಿಲ್ಲರ್‍ಗೆ ಯಾವ ತೊಂದರೆ ಇಲ್ಲ ಎಂದು ಅಕಾರಿಗಳು ಹೇಳಿಕೆ ನೀಡುತ್ತಿದ್ದರೂ ಬಿಬಿಎಂಪಿಯವರ ಅವೈಜ್ಞಾನಿಕ ಕಾಮಗಾರಿಗೆ ಆಕ್ರೋಶ ವ್ಯಕ್ತವಾಗಿದೆ.

Share News

About admin

Check Also

ಬೆಲೆ ಏರಿಕೆ ಕುರಿತು ಸಿಹಿ ಸುದ್ದಿ ನೀಡಿದ ಸಿಎಂ

ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್, ಹಾಲಿನ ದರ ಏರಿಕೆ ಮಾಡಲು ಚಿಂತನೆ ನಡೆದಿತ್ತು. ಆದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭರವಸೆ ನೀಡಿದಂತೆ …

Leave a Reply

Your email address will not be published. Required fields are marked *

You cannot copy content of this page