ಕೋವಿಡ್ ನಿಯಮ ಬ್ರೇಕ್ : ಭರ್ಜರಿ ದಂಡ ವಸೂಲಿ ಮಾಡಿದ ಪಾಲಿಕೆ

ಹುಬ್ಬಳ್ಳಿ: ಹು – ಧಾ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ ಒಟ್ಟು 532 ಜನರಿಂದ 1,29,050 ಲಕ್ಷ ರೂ . ದಂಡ ವಸೂಲಿ ಮಾಡಲಾಗಿದೆ.

ಪಾಲಿಕೆಯಿಂದ ಇದುವರೆಗೆ ಒಟ್ಟು 77,41,100 ಲಕ್ಷ ರೂ. ದಂಡ ವಿಧಿಸಿದಂತಾಗಿದೆ. ಬುಧವಾರ ಪಾಲಿಕೆಯ ವಲಯಗಳ ವ್ಯಾಪ್ತಿಯಲ್ಲಿ ಪರಿಸರ ಅಭಿಯಂತರರು ಹಾಗೂ ಆರೋಗ್ಯ ನಿರೀಕ್ಷಕರು ಮಾಸ್ಕ್ ಧರಿಸದೆ ತಿರುಗಾಡುತ್ತಿದ್ದ 468 ಜನರಿಗೆ 1,16,250 ಲಕ್ಷ ರೂ. ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದ 64 ಜನರಿಗೆ 12,800 ರೂ. ದಂಡ ವಿಧಿಸಿದ್ದಾರೆ. ಇನ್ನಾದರು ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕಾಗಿದೆ.

Share News

About admin

Check Also

ಬೆಲೆ ಏರಿಕೆ ಕುರಿತು ಸಿಹಿ ಸುದ್ದಿ ನೀಡಿದ ಸಿಎಂ

ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್, ಹಾಲಿನ ದರ ಏರಿಕೆ ಮಾಡಲು ಚಿಂತನೆ ನಡೆದಿತ್ತು. ಆದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭರವಸೆ ನೀಡಿದಂತೆ …

Leave a Reply

Your email address will not be published. Required fields are marked *

You cannot copy content of this page