Breaking News

ಬೀಗ ಮುರಿದು ಮಂಗಳೂರಿನ ಪ್ರಸಿದ್ಧ ದೇಗುಲ ಕಳ್ಳತನ – ಚಿನ್ನಾಭರಣ, ಬೆಳ್ಳಿ ವಸ್ತುಗಳು ಕಳವು!

ಮಂಗಳೂರು: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕಿಲ್ಪಾಡಿ ಗ್ರಾಮದ ಕೊರ್ದಬ್ಬು ದೈವಸ್ಥಾನದಲ್ಲಿ ಬೀಗ ಮುರಿದು ಒಳನುಗ್ಗಿದ ಕಳ್ಳರು ದೈವದ ಬೆಳ್ಳಿಯ ಮುಖವಾಡ, ಬೆಳ್ಳಿಯ ಕವಚ ಹೊಂದಿರುವ ಖಡ್ಗ, ಬೆಳ್ಳಿಯ ಸೊಂಟಪಟ್ಟಿಗಳು ಹಾಗೂ ಚಿನ್ನಾಭರಣಗಳನ್ನು ಕಳವು ಮಾಡಿದ್ದಾರೆ. ಒಟ್ಟು ಸುಮಾರು 11 ಕೆಜಿ ಬೆಳ್ಳಿ ಹಾಗೂ 5 ಪವನ್ ಚಿನ್ನಾಭರಣ ಕಳವಾಗಿದ್ದು, ಸೊತ್ತುಗಳ ಮೌಲ್ಯ ₹14.95 ಲಕ್ಷ ಎಂದು ಪೊಲೀಸರು ತಿಳಿಸಿದ್ದಾರೆ. ಸೆ.1ರ ಸಂಜೆ ಪೂಜೆ ಮುಗಿಸಿ ರಾತ್ರಿ 7 ಗಂಟೆ ಸುಮಾರಿಗೆ ಅರ್ಚಕರು ದೈವಸ್ಥಾನಕ್ಕೆ ಬೀಗ ಹಾಕಿ ತೆರಳಿದ್ದರು. ಸೆ.2ರ ಬೆಳಗ್ಗೆ 7 ಗಂಟೆಗೆ ಪೂಜೆಗೆ ಬಂದಾಗ ಮುಖ್ಯ ದ್ವಾರದ ಬೀಗ ಮುರಿದಿರುವುದು ಕಂಡುಬಂದಿದ್ದು, ಗರ್ಭಗುಡಿಯಲ್ಲಿದ್ದ ಆಭರಣಗಳು ಕಾಣೆಯಾಗಿರುವುದು ಪತ್ತೆಯಾಗಿದೆ. ಕಳ್ಳರು ಸುಮಾರು 6 ಕೆಜಿ ತೂಕದ ಬೆಳ್ಳಿಯ ಮುಖವಾಡ, 1 ಕೆಜಿ ತೂಕದ ಬೆಳ್ಳಿಯ ಕವಚ ಹೊಂದಿರುವ ಖಡ್ಗ ಹಾಗೂ 4 ಕೆಜಿ ತೂಕದ ಎರಡು ಬೆಳ್ಳಿಯ ಸೊಂಟಪಟ್ಟಿಗಳನ್ನು ಕಳವು ಮಾಡಿದ್ದಾರೆ. ಸೆ.1ರ ರಾತ್ರಿ 7ರಿಂದ ಸೆ.2ರ ಬೆಳಗ್ಗೆ 7ರ ನಡುವೆ ಕಳ್ಳತನ ನಡೆದಿರುವ ಶಂಕೆಯಿದ್ದು, ಮುಲ್ಕಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ.

Share News

About BigTv News

Check Also

6ನೇ ತರಗತಿ ಮೇಲೆ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಆರೋಪಿ ಬಂಧನ

ಮುಂಡಗೋಡ: ಆರನೇ ತರಗತಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಗರ್ಭಿಣಿಯನ್ನಾಗಿಸಿದ ಆರೋಪದ ಮೇಲೆ 65 ವರ್ಷದ ಇಸ್ಮಾಯಿಲ್ ಹುಲಗೂರ …

Leave a Reply

Your email address will not be published. Required fields are marked *