Breaking News

ಬಾರ್‌ನಲ್ಲಿ ತಂಡಗಳ ನಡುವೆ ಹೊಡೆದಾಟ: ಇಬ್ಬರಿಗೆ ಗಾಯ

ಮಂಗಳೂರು: ಪಾಲ್ದಾನೆ ಬಳಿ ತಂಡವೊಂದು ಮತ್ತೊಂದು ತಂಡದ ಮೇಲೆ ಹಲ್ಲೆಗೈದ ಘಟನೆ ಶನಿವಾರ ರಾತ್ರಿ ಸಂಭವಿಸಿದೆ. ಕಾಪ್ರಿಗುಡ್ಡ ನಿವಾಸಿ ವಿನೀತ್ ಮತ್ತು ಆತನ ಗೆಳೆಯರು ಕುಳಿತಿದ್ದ ವೇಳೆ ಅಲ್ಲಿಗೆ ಆಗಮಿಸಿದ ಜೀವನ್, ಗಣೇಶ್ ಮತ್ತಿತರರು ತಗಾದೆ ತೆಗೆದು ವಾಗ್ವಾದ ಆರಂಭಿಸಿದ್ದರು.ಈ ವೇಳೆ ಎರಡೂ ತಂಡಗಳ ಮಧ್ಯೆ ಹೊಡೆದಾಟ ನಡೆದಿದೆ. ಜೀವನ್, ಗಣೇಶ್ ಮತ್ತಿತರರು ವಿನೀತ್ ತಂಡದ ಮೇಲೆ ಗಂಭೀರ ಹಲ್ಲೆಗೈದಿದ್ದಾರೆ. ಗಾಯಗೊಂಡವರನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಮಂಗಳೂರು ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Share News

About BigTv News

Check Also

ದೇರಳಕಟ್ಟೆ: ಮೆಡಿಕಲ್‌ ಕಾಲೇಜಿನಲ್ಲಿ Ragging ಪ್ರಕರಣ ದಾಖಲು

ಮಂಗಳೂರು: ದೇರಳಕಟ್ಟೆಯ ಮೆಡಿಕಲ್ ಕಾಲೇಜೊಂದರಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ರಾಗಿಂಗ್ ನಡೆಸಿ ಜೀವ ಬೆದರಿಕೆ ಹಾಕಿರುವ ಆರೋಪದಡಿ ಉಳ್ಳಾಲ …

Leave a Reply

Your email address will not be published. Required fields are marked *