Breaking News

ಮಕ್ಕಳಾಗದ ಕಾರಣಕ್ಕೆ ಪತಿ ದೌರ್ಜನ್ಯ: ಪತ್ನಿ ಆತ್ಮಹತ್ಯೆ

ಬೆಂಗಳೂರು: ಮಕ್ಕಳಾಗದ ಕಾರಣಕ್ಕೆ ಪತಿ ನೀಡುತ್ತಿದ್ದ ಕಿರುಕುಳಕ್ಕೆ ಬೇಸತ್ತು 27 ವರ್ಷದ ಕಾವ್ಯಾ ಎಂಬ ಗೃಹಿಣಿ ಆವಲಹಳ್ಳಿಯ ಹುಸ್ಕೂರುಕೋಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಪತಿ ನವೀನ್‌ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮದುವೆಯಾಗಿ 9 ವರ್ಷಗಳಾದರೂ ಮಕ್ಕಳಾಗದ ವಿಚಾರಕ್ಕೆ ನವೀನ್‌ ಪದೇಪದೇ ಜಗಳ ಮಾಡಿ ಹಲ್ಲೆ ನಡೆಸುತ್ತಿದ್ದ ಎಂದು ಕಾವ್ಯಾ ಕುಟುಂಬ ಆರೋಪಿಸಿದೆ. ವರಮಹಾಲಕ್ಷ್ಮೀ ಹಬ್ಬದಂದೂ ಹಲ್ಲೆ ನಡೆಸಿದ್ದು, ಹಿರಿಯರು ರಾಜಿ ಪಂಚಾಯಿತಿ ಮಾಡಿದ್ದರೂ ಕಿರುಕುಳ ಮುಂದುವರಿದಿತ್ತು ಎನ್ನಲಾಗಿದೆ. ಆತ್ಮಹತ್ಯೆಗೂ ಮುನ್ನ ಕಾವ್ಯಾ ತನ್ನ ತಂಗಿಯ ವಾಟ್ಸ್‌ಆಪ್‌ಗೆ ಡೆತ್‌ನೋಟ್‌ ಸಂದೇಶ ಕಳುಹಿಸಿ, ತನ್ನ ಸಾವಿಗೆ ಪತಿಯೇ ಕಾರಣ ಹಾಗೂ ಆತನ ಕಿರುಕುಳ ಸಹಿಸಲಾಗುತ್ತಿಲ್ಲ ಎಂದು ತಿಳಿಸಿದ್ದರು. ಬಳಿಕ ನೇಣು ಬಿಗಿದುಕೊಂಡು ಮೃತಪಟ್ಟಿದ್ದು, ಆವಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

ಬೆಂಗಳೂರು | ಸಿಕ್ಕವರ ಮೇಲೆ ಮಚ್ಚು ಬೀಸಿದ ದುಷ್ಕರ್ಮಿಗಳು: ಎಂಟು ಮಂದಿಗೆ ಗಾಯ

ಬೆಂಗಳೂರು: ಮಾಸ್ಕ್ ಧರಿಸಿ ನಾಲ್ಕು ಬೈಕ್‌ಗಳಲ್ಲಿ ಬಂದಿದ್ದ ಎಂಟು ಮಂದಿ ದುಷ್ಕರ್ಮಿಗಳು ಉತ್ತರಹಳ್ಳಿ ಮುಖ್ಯರಸ್ತೆ ಹಾಗೂ ಅರಹಳ್ಳಿ ಗೇಟ್ ಬಳಿ …

Leave a Reply

Your email address will not be published. Required fields are marked *