ಬಾಗಲಕೋಟೆ: ಸುಳ್ಳು ಪ್ರಕರಣ ದಾಖಲಿಸಿತ್ತೇನೆ ಎಂದು ಬೆದರಿಸಿ ಲಂಚ ಕೇಳಿದ್ದ ಪ್ರಕರಣದಲ್ಲಿ ಕೆರೂರು ಪೊಲೀಸ್ ಠಾಣೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಶಂಕ್ರಪ್ಪ ಬೂದಿಹಾಳ ಎಂಬುವರನ್ನು ಠಾಣೆಗೆ ಕರೆತಂದಿದ್ದ ಪೊಲೀಸ್ ಇನ್ ಸ್ಪೆಕ್ಟರ್ ಭೀಮಪ್ಪ ರಬಕವಿ, ₹1.70 ಲಕ್ಷ ಲಂಚ ನೀಡದಿದ್ದರೆ ಇಸ್ಪೀಟ್ ಅಡಿಸುತ್ತಿದ್ದೆ ಎಂದು ಪ್ರಕರಣ ದಾಖಲಿಸುವುದಾಗಿ ಬೆದರಿಸಿದ್ದರು. ₹1.70 ಲಕ್ಷ ಲಂಚ ಪಡೆಯುವಾಗ ದಾಳಿ ಮಾಡಿ ಇನ್ ಸ್ಪೆಕ್ಟರ್ ಭೀಮಪ್ಪ ರಬಕವಿ, ಕಾನ್ ಸ್ಟೆಬಲ್ ಸಂತೋಷ ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

