ಚಾಮರಾಜನಗರದ ಹನೂರು ವನ್ಯಜೀವಿ ಉಪವಿಭಾಗದ ಬಫರ್ ವಲಯದಲ್ಲಿ ಜಿಂಕೆಯೊಂದನ್ನು ಕಳ್ಳಬೇಟೆಗಾರರು ಬೇಟೆಯಾಡಿರುವ ಘಟನೆ ನಡೆದಿದೆ. ಸೋಮವಾರ ರಾತ್ರಿ ಪಚ್ಚೆದೊಡ್ಡಿ ಶಾಖೆಯ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಗಸ್ತು ತಿರುಗುತ್ತಿದ್ದ ವೇಳೆ ಗುಂಡಿನ ಶಬ್ಧ ಕೇಳಿಬಂದಿದೆ. ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಗಂಡು ಜಿಂಕೆಯ ಎದೆಯ ಭಾಗ ಹಾಗೂ ಮುಂಗಾಲುಗಳನ್ನು ಕತ್ತರಿಸಿ ಬಿಸಾಡಿರುವುದು ಪತ್ತೆಯಾಗಿದೆ. ಕಳ್ಳಬೇಟೆಗಾರರು ಜಿಂಕೆಯನ್ನು ಬೇಟೆಯಾಡಿ ಪರಾರಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿಗಳ ಪತ್ತೆಗೆ ಅರಣ್ಯ ಇಲಾಖೆ ಸಿಬ್ಬಂದಿ ಶೋಧ ಕಾರ್ಯ ಮುಂದುವರಿಸಿದ್ದಾರೆ. ಕಾವೇರಿ ವನ್ಯಧಾಮದಲ್ಲಿ ಶೂಟೌಟ್ ನಡೆದ ಬಳಿಕ ಇದು ಎರಡನೇ ಕಳ್ಳಬೇಟೆ ಪ್ರಕರಣವಾಗಿದೆ. ಸೆ.1ರಂದು ಉಡುತೊರೆ ಜಲಾಶಯದ ಬಳಿ ಬೇಟೆಗಾರರು ಕಡವೆಯನ್ನು ಕೊಂದು ನಾಲ್ಕು ಭಾಗಗಳಾಗಿ ಕತ್ತರಿಸಿದ್ದರು. ಇದರ ಬೆನ್ನಲ್ಲೇ ಮಲೆ ಮಹದೇಶ್ವರ ವನ್ಯಧಾಮದಲ್ಲಿ ಜಿಂಕೆ ಬೇಟೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

