ಬೆಂಗಳೂರು: ಬಾಣಸವಾಡಿ ಠಾಣೆ ಪೊಲೀಸರು ಸುಮಾರು 300 ಕಿ.ಮೀ. ಚೇಸ್ ಮಾಡಿ ಕುಖ್ಯಾತ ಮನೆಗಳ್ಳರಾದ ದೊಡ್ಡಬಳ್ಳಾಪುರದ ಗಂಗಾಧರ್ (40) ಹಾಗೂ ಕೊರಟಗೆರೆಯ ಬಸವರಾಜು (35) ಅವರನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ₹77.50 ಲಕ್ಷ ಮೌಲ್ಯದ 470 ಗ್ರಾಂ ಚಿನ್ನಾಭರಣ, 886 ಗ್ರಾಂ ಬೆಳ್ಳಿ ವಸ್ತುಗಳು, ₹3 ಲಕ್ಷ ನಗದು ಹಾಗೂ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಎಚ್‌ಬಿಆರ್ ಲೇಔಟ್‌ನ ನಿವಾಸಿಯೊಬ್ಬರು ಕುಟುಂಬದೊಂದಿಗೆ ಹೊರಗೆ ಹೋಗಿದ್ದ ವೇಳೆ ಮನೆಯ ಬಾಗಿಲು ಮುರಿದು ₹14 ಲಕ್ಷ ಹಣವಿದ್ದ ಬ್ಯಾಗ್ ಕಳವು ಮಾಡಲಾಗಿತ್ತು. ಸಿಸಿಟಿವಿ ದೃಶ್ಯಗಳ ಆಧಾರದಲ್ಲಿ ತನಿಖೆ ನಡೆಸಿದ ಪೊಲೀಸರು ಕಲ್ಯಾಣನಗರ ಸರ್ವೀಸ್ ರಸ್ತೆಯಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು ಬೆಂಗಳೂರು ಸೇರಿದಂತೆ ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲೂ ಮನೆಗಳ್ಳತನ ನಡೆಸಿರುವುದಾಗಿ ಒಪ್ಪಿಕೊಂಡಿದ್ದಾರೆ. ಗಂಗಾಧರ್ ವಿರುದ್ಧ 60 ಹಾಗೂ ಬಸವರಾಜು ವಿರುದ್ಧ 33 ಪ್ರಕರಣಗಳಿವೆ. ಇಬ್ಬರ ಬಂಧನದಿಂದ ಒಟ್ಟು 7 ಮನೆಗಳ್ಳತನ ಪ್ರಕರಣಗಳು ಪತ್ತೆಯಾಗಿವೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

