ನವಲಗುಂದ: ಸರ್ಕಾರಿ ನೌಕರರಿಗೆ ಮಾರಕವಾಗಿರುವ ಎನ್‌ಪಿಎಸ್ ರದ್ದುಗೊಳಿಸಿ, ಹಳೇ ಪಿಂಚಣಿ ಯೋಜನೆ ಮರುಜಾರಿ ಮಾಡಬೇಕೆಂದು ಆಗ್ರಹಿಸಿ ಎನ್‌ಪಿಎಸ್ ಘಟಕದ ಪದಾಧಿಕಾರಿಗಳು ತಹಶೀಲ್ದಾರ್ ಕಚೇರಿಯ ಶಿರಸ್ತೇದಾರ್ ಕೃಷ್ಣ ಅರೇರ ಅವರಿಗೆ ಮನವಿ ಸಲ್ಲಿಸಿದರು.
ಚುನಾವಣೆ ಪೂರ್ವದಲ್ಲಿ ರಾಜಕೀಯ ಪಕ್ಷಗಳು ಒಪಿಎಸ್ ಜಾರಿಗೊಳಿಸುವುದಾಗಿ ಘೋಷಿಸಿದ್ದವು ಸಮಿತಿ ರಚನೆ ಆಗಿದೆಯೇ ಹೊರತು ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ ಎಂದು ದೂರಿದರು.
ರಾಜ್ಯ ಸಂಘಟನಾ ಕಾರ್ಯದರ್ಶಿ ಯಶವಂತಿ ನರಸಪ್ಪನವರ, ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎನ್.ವಗ್ಗರ, ಎಸ್.ಎಫ್.ನೀರಲಗಿ, ಎನ್.ವೈ.ಕಳಸಾಪುರ, ಮುತ್ತು ಚಿಕ್ಕನರಗುಂದ, ನಾಗರಾಜ ಗಾನಗೇರ, ಮಹಾದೇವಿ ಬಿಜ್ಜರಗಿ, ಬಸವರಾಜ ಸನದಿ, ಸತೀಶ್ ಕೋರೆ, ರೇವಣಸಿದ್ದ ಡೆಂಗಿ, ಅನಿಲ ಕಳಸಣ್ಣವರ, ಯಲ್ಲಪ್ಪ ಸವದತ್ತಿ ಇದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

