ಹಾವೇರಿ: ಪರವಾನಗಿ ನಿಯಮ ಉಲ್ಲಂಘಿಸಿ ಕಲ್ಲು ಗಣಿಗಾರಿಕೆ ನಡೆಸಿದ ಆರೋಪದಡಿ ಸಚಿವ ರುದ್ರಪ್ಪ ಲಮಾಣಿ ಅವರಿಗೆ ಸುಮಾರು ₹3 ಕೋಟಿ ದಂಡ ವಿಧಿಸಿ ನೋಟಿಸ್ ನೀಡಲಾಗಿದೆ. ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಪುತ್ರ ಪುಲಿಕೇಶಿ ಹಾಗೂ ತಮ್ಮ ಪರಮೇಶ್ವರಪ್ಪ ಅವರ ಕ್ವಾರಿ-ಕ್ರಷರ್‌ಗಳಿಗೂ ನಿಯಮ ಉಲ್ಲಂಘನೆ ಆರೋಪದಡಿ ತಲಾ ಸುಮಾರು ₹50 ಲಕ್ಷ ದಂಡ ವಿಧಿಸಲಾಗಿದೆ. ದಂಡ ವಿಧಿಸಿರುವುದನ್ನು ಖಂಡಿಸಿ ಕಲ್ಲು ಕ್ವಾರಿ-ಕ್ರಷರ್ ಮಾಲೀಕರ ಸಂಘ ಸೆ.18ರಿಂದ ರಾಜ್ಯಾದ್ಯಂತ ಕ್ವಾರಿ-ಕ್ರಷರ್ ಬಂದ್ ಮಾಡಿ ಮುಷ್ಕರ ನಡೆಸುವುದಾಗಿ ಘೋಷಿಸಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

