Breaking News

16 ವರ್ಷದ ಅಪ್ರಾಪ್ತೆ ಮೇಲೆ ಗ್ಯಾಂಗ್‌ರೇಪ್‌, 8 ಬಾರಿ ಇರಿದು ಹತ್ಯೆ : ಮೂವರು ಅಪ್ರಾಪ್ತರು ಸೇರಿ ನಾಲ್ವರು ಅರೆಸ್ಟ್‌!

ದೆಹಲಿ: ಸ್ವರೂಪ್ ನಗರದಲ್ಲಿ 16 ವರ್ಷದ ಬಾಲಕಿ ಮೇಲೆ ನಾಲ್ವರು ಯುವಕರು ಸಾಮೂಹಿಕ ಅತ್ಯಾಚಾರ ಎಸಗಿ, ಬಳಿಕ ಚಾಕುವಿನಿಂದ 8 ಬಾರಿ ಇರಿದು ಕೊಲೆ ಮಾಡಿದ ಘಟನೆ ಸೆ.12ರಂದು ನಡೆದಿದೆ. ಮೃತದೇಹವನ್ನು ಬಯಲು ಪ್ರದೇಶದಲ್ಲಿ ಎಸೆದು ಆರೋಪಿಗಳು ಪರಾರಿಯಾಗಿದ್ದರು. ಪ್ರಕರಣದ ತನಿಖೆ ನಡೆಸಿದ ಪೊಲೀಸರು 50ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ, ಸರಕು ಸಾಗಣೆ ಟೆಂಪೋವೊಂದರ ಜಾಡು ಹಿಡಿದಿದ್ದಾರೆ. ಸೆ.15-16ರ ಮಧ್ಯರಾತ್ರಿ ಕಾರ್ಯಾಚರಣೆ ನಡೆಸಿ ಮೂವರು ಅಪ್ರಾಪ್ತರು ಹಾಗೂ 19 ವರ್ಷದ ಯುವಕ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ. ಬಾಲಕಿ ಸ್ನೇಹಿತನನ್ನು ಭೇಟಿಯಾಗಲು ತೆರಳಿದ್ದಾಗ, ಆತ ಮೂವರನ್ನು ಕರೆಸಿಕೊಂಡಿದ್ದ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಟೆಂಪೋದಲ್ಲಿ ಕರೆದೊಯ್ದು ಕೃತ್ಯ ಎಸಗಿದ ಬಳಿಕ ದೂರು ನೀಡುವ ಭಯದಿಂದ ಬಾಲಕಿಯನ್ನು ಹತ್ಯೆ ಮಾಡಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ತಿಳಿಸಿದ್ದಾರೆ.

Share News

About BigTv News

Check Also

80s ಫೋಟೋ ಟ್ರೆಂಡ್‌ನಲ್ಲೂ ಸೈಬರ್ ವಂಚಕರ ಕನ್ನ: ಹಣ ಕೊಡದಿದ್ದಕ್ಕೆ ಬೆತ್ತಲೆ ಫೋಟೋ ಹರಿಬಿಟ್ಟ ವಂಚಕರು

ಬೆಂಗಳೂರು ಉತ್ತರ ತಾಲೂಕಿನ ಬಾಗಲಗುಂಟೆಯ ವಿನೋದ್ (45) ಎಂಬುವರು 80ರ ದಶಕದ ಶೈಲಿಯಲ್ಲಿ ಫೋಟೋ ಎಡಿಟ್ ಮಾಡಲು ನಕಲಿ ಆ್ಯಪ್ …

Leave a Reply

Your email address will not be published. Required fields are marked *