Breaking News

ಕಲ್ಯಾಣಸ್ವಾಮಿ ಮಠದಲ್ಲಿ ದಸರಾ ಆಚರಣೆ….

ಬಳ್ಳಾರಿ: ಬಳ್ಳಾರಿ ನಗರದ ಕಮ್ಮರಚೇಡು ಕಲ್ಯಾಣ ಸ್ವಾಮಿ ಮಠದಲ್ಲಿ ಆಯೋಜಿಸಲಾಗಿದ್ದ ಶ್ರೀದೇವಿ ಪುರಾಣ ಪ್ರವಚನ ಹಾಗೂ ದಸರಾ ಉತ್ಸವದ ಸಮಾರೋಪ ಕಾರ್ಯಕ್ರಮದಲ್ಲಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಮತ್ತು ಯುವ ಸಬಲೀಕರಣ, ಕ್ರೀಡಾ ಇಲಾಖೆ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ನಾಗೇಂದ್ರ ಅವರು ಭಾಗವಹಿಸಿದರು. ಕಲ್ಯಾಣ ಶ್ರೀಗಳಿಂದ ಆಶೀರ್ವಾಚನ ಪಡೆದು ಸಚಿವ ಬಿ.ನಾಗೇಂದ್ರ ಅವರು ಮಾತನಾಡಿದರು.

ಹಲವಾರು ಸಮುದಾಯದವರು ವಾಸ ಮಾಡುವಂತ ಭಾಗದಲ್ಲಿ ಕಲ್ಯಾಣ ಶ್ರೀಗಳು ಮಠವನ್ನ ಕಟ್ಟಿ ಬೆಳಸುವಲ್ಲಿ ಬಹಳ ಶ್ರಮ ಪಟ್ಟಿದ್ದಾರೆ. ಹಾಗೇ ನವರಾತ್ರಿ ಉತ್ಸವಗಳನ್ನ ನಡೆಸುವ ಮೂಲಕ ಮಹಿಳೆಯರಲ್ಲಿ ಮಕ್ಕಳಲ್ಲಿ ಸಂಪ್ರದಾಯ ಧರ್ಮ ಜಾಗೃತಿ ಮೂಡಿಸುವಂತ ಕಾರ್ಯಗಳನ್ನ ನಡೆಸಿಕೊಂಡು ಬಂದಿದ್ದಾರೆ. ಅಲ್ಲದೇ ಕಲಾ ಪ್ರತಿಭೆಗಳನ್ನ ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ಕಲ್ಯಾಣ ಮಠ ಬಡ ಮಠವಲ್ಲ ಮಠಕ್ಕೆ ಬೇಕಾಗುವ ಎಲ್ಲಾ ಸೌಲಭ್ಯಗಳನ್ನು ಸರ್ಕಾರದಿಂದ ಕೊಡಿಸುವ ಕೆಲಸ ಮಾಡುವುದಲ್ಲದೆ ಬೆನ್ನೆಲುಬಾಗಿ ನಿಲ್ಲುತ್ತೇನೆ ಎಂದು ಭರವಸೆ ನೀಡಿದ್ದಾರೆ.

ಇದೇ ವೇಳೆ ಕಲಬುರಗಿಯ ಸಿದ್ದಲಿಂಗ ಜಗದ್ಗುರುಗಳು ಅಶೀರ್ವಚನ ನೀಡಿದರು. ನಂತರ ಸಚಿವರಿಂದ ಶ್ರೀಗಳಿಗೆ ಗೌರವ ಸಮರ್ಪಣೆ ಅರ್ಪಿಸಲಾಯಿತು. ಮಠಾಧೀಶರ ಪರಿಷತ್ತಿನ ಅಧ್ಯಕ್ಷರಾದ ಕಲ್ಯಾಣ ಸ್ವಾಮಿಗಳ ನೇತೃತ್ವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರಿಗೆ ಆಶೀರ್ವಾದಿಸಿ ಸನ್ಮಾನಿಸಲಾಯಿತು

Share News

About BigTv News

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *