Breaking News

ಬೆಳಗಾವಿಯಲ್ಲಿ ದಂಪತಿ ನಡುವೆ ಗಲಾಟೆ; ಪತ್ನಿ ಹತ್ಯೆ ಮಾಡಿದ ಪತಿ?*

ಬೆಳಗಾವಿ: ದಂಪತಿ ನಡುವಿನ ಗಲಾಟೆ ವಿಕೋಪಕ್ಕೆ ತಿರುಗಿ ಪತ್ನಿಯನ್ನು ಮಾರಕ ಆಯುಧದಿಂದ ಹತ್ಯೆ ಮಾಡಿದ ಆರೋಪ ಪತಿ ವಿರುದ್ಧ ಕೇಳಿಬಂದಿರುವ ಘಟನೆ ರಾಯಬಾಗ ತಾಲೂಕಿನ ಮಾಡಲಗಿ ಗ್ರಾಮದಲ್ಲಿ ನಡೆದಿದೆ. ಕಲ್ಲವ್ವ ಸದಾಶಿವ ಮರಡಿ (55) ಮೃತಪಟ್ಟ ಮಹಿಳೆಯಾಗಿದ್ದು, ಪತಿ ಸದಾಶಿವ ಮರಡಿ (65) ವಿರುದ್ಧ ಹತ್ಯೆ ಆರೋಪ ಕೇಳಿಬಂದಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ರಾಯಬಾಗ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದಂಪತಿ ನಡುವೆ ಗಲಾಟೆ ನಡೆಯಲು ನಿಖರ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಹತ್ಯೆಯ ಹಿನ್ನೆಲೆ ಹಾಗೂ ಘಟನೆಗೆ ಕಾರಣವೇನು ಎಂಬುದರ ಕುರಿತು ತನಿಖೆ ಮುಂದುವರಿಸಿದ್ದಾರೆ.

Share News

About BigTv News

Check Also

ಬೆಂಗಳೂರಲ್ಲಿ ಸಿಲಿಂಡರ್ ಸ್ಫೋಟ! ರಾಯಚೂರು ಮೂಲದ ಆರು ಜನ ಗಂಭೀರ ಗಾಯ!

ಬೆಂಗಳೂರು, ಅ.3: ಅಡುಗೆ ಮಾಡುವ ವೇಳೆ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಒಂದೇ ಕುಟುಂಬದ ಆರು ಮಂದಿ ಗಾಯಗೊಂಡ ಘಟನೆ ನಾಯಂಡಹಳ್ಳಿಯ …

Leave a Reply

Your email address will not be published. Required fields are marked *